RTPS 4 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿರುವುದರಿಂದ ಇಂಧನ ಇಲಾಖೆಗೆ ವಿದ್ಯುತ್ ಪೂರೈಕೆಯದ್ದೇ ಟೆನ್ಷನ್ ಆಗಿದೆ. ರಾಜ್ಯದಲ್ಲಿ ಕಗ್ಗತ್ತಲು ಆವರಿಸುವ ಆತಂಕ ಎದುರಾಗಿದೆ. RTPS 8 ವಿದ್ಯುತ್ ಉತ್ಪಾದನೆ ಘಟಕಗಳ ಪೈಕಿ 4 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ.
8 ಘಟಕಗಳ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಇದೆ. ಆದರೆ ಕೇವಲ 4 ವಿದ್ಯುತ್ ಘಟಕಗಳಲ್ಲಿ ಕೇವಲ 903 ಮೆಗಾವ್ಯಾಟ್ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಯಚೂರು ವಿದ್ಯುತ್ ಉತ್ಪಾದನೆ ಕೇಂದ್ರದಲ್ಲಿ ನಾಲ್ಕೈದು ದಿನದಿಂದ ತಾಂತ್ರಿಕ ದೋಷ ಉಂಟಾಗಿದೆ.
ಹೀಗಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಶುರುವಾಗುವ ಆತಂಕ ಎದುರಾಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಕೊರತೆ ಹಿನ್ನೆಲೆ ಕತ್ತಲು ಆವರಿಸೋ ಭೀತ ಶುರುವಾಗಿದೆ. ರಾಜ್ಯದಲ್ಲಿ ವಿದ್ಯುತ್ ಅಭಾವದಿಂದ ಇಂಧನ ಇಲಾಖೆ ಆತಂಕಕ್ಕೆ ಒಳಗಾಗಿದೆ. ಪರೀಕ್ಷೆಗಳ ಸಮಯದಲ್ಲೇ ಪದೇ ಪದೇ ಕರೆಂಟ್ ಕಟ್ ಮಾಡೋ ಸಾಧ್ಯತೆ ಇದೆ.
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಟೆನ್ಷನ್ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಯಾಗದ ಕಾರಣದಿಂದ ಲೋಡ್ ಶೆಡ್ಡಿಂಗ್ ಮಾಡಬೇಕಾದ ಸ್ಥಿತಿಯಲ್ಲಿ ಇಂಧನ ಇಲಾಖೆ ಇದೆ. ವಿದ್ಯುತ್ ಕೊರತೆಯಿಂದ ವಿದ್ಯುತ್ ಪೂರೈಕೆ ಇಂಧನ ಇಲಾಖೆಗೆ ಸವಾಲು ಎದುರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ಆಭಾವ ಎದುರಾಗುವ ಆತಂಕ ಹೆಚ್ಚಾಗಿದೆ.