ಕಲಬುರಗಿ :ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುವಂತೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಶಿವಕುಮಾರ್ ನಾಟೀಕರ್ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಫಜಲಪುರ ಪಟ್ಟಣದಲ್ಲಿ ಎಂಟು ದಿನಗಳಿಂದ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕರ್ ಬೇಸಿಗೆ ಹಿನ್ನೆಲೆ ಸಂಪೂರ್ಣ ಬತ್ತಿ ಹೋಗಿರೋ ಭೀಮಾ ನದಿಗೆ ನೀರು ಹರಿಸಬೇಕೆಂಬ ಹೆನ್ನೆಲೆಯಲ್ಲಿ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ ಈಗ ಅವರ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ವಿಜಯಪುರದ ಆಸ್ಪತ್ರೆಗೆ ಆಂಬ್ಯುಲೇನ್ಸ್ ನಲ್ಲಿ ತೆಗೆದುಕೊಂಡು ಹೋಗಿ ದಾಖಲಿಸಲಾಗಿದೆ.
ಜನ ಜಾನುವಾರುಗಳಿಗೂ ಕುಡಿಯಲು ನೀರಿಲ್ಲ. ಅಫಜಲಪೂರ ಜೇವರ್ಗಿ ತಾಲೂಕಿನ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದರೂ ಮಹಾರಾಷ್ಟದ ಸರ್ಕಾರ ಸರಿಯಾಗಿ ಸ್ಪಂಧಿಸುತ್ತಿಲ್ಲ. ರಾಜ್ಯ ಸರ್ಕಾರ ಕೃಷ್ಣ ಹಾಗೂ ಬಸವಸಾಗರದಿಂದ ನೀರು ಹರಿಸುವಂತೆ ಕೂಡ ಒತ್ತಾಯ ಮಾಡಲಾಗುತ್ತಿದೆ ಎಂಬುದು ತಿಳಿದು ಬಂದಿದೆ.


