Friday, August 22, 2025
24.2 C
Bengaluru
Google search engine
LIVE
ಮನೆಸುದ್ದಿಅಕ್ರಮ‌ ಮದ್ಯ ಸಾಗಣೆ, ಕಾರು ಸಮೇತ ಮದ್ಯ ವಶ !!

ಅಕ್ರಮ‌ ಮದ್ಯ ಸಾಗಣೆ, ಕಾರು ಸಮೇತ ಮದ್ಯ ವಶ !!

ಕಲಬುರಗಿ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಲಬುರಗಿ ಚೆಕ್ ಪೋಸ್ಟ್ ಸೇರಿದಂತೆ ಇತರೆಲ್ಲೆಡೆ ತಪಾಸಣಾ ಸಿಬ್ಬಂದಿ ಗಸ್ತು ಚುರುಕುಗೊಂಡಿದ್ದು, ಯಡ್ರಾಮಿ ತಾಲೂಕಿನ ಎಸ್.ಎನ್.ಹಿಪ್ಪರಗಾ ಗ್ರಾಮದ ಬಸ ನಿಲ್ದಾಣ ಹತ್ತಿರ ವಾಹನಗಳ ತಪಾಸಣೆ‌ ಸಂದರ್ಭದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 214.560 ಲೀಟರ ಮದ್ಯ ಹಾಗೂ ವಿವಿಧ ಬ್ರಾಂಡುಗಳ 117.360 ಲೀಟರ ಬೀಯರ್ ವಶಕ್ಕೆ ಪಡೆಯಲಾಗಿದೆ.

ಮಂದೇವಾಲ ಗ್ರಾಮದ ಕಡೆಯಿಂದ ಎಸ್.ಎನ್.ಹಿಪ್ಪರಗಾ ಗ್ರಾಮದ ಕಡೆಗೆ ಬರುತ್ತಿದ್ದ ಮಾರುತಿ ಸುಜಕಿ ಈಕೋ ಕಾರ್ ನೊಂದಣಿ ಸಂಖ್ಯೆ ಕೆಎ.21 ಪಿ.4470 ರಲ್ಲಿ ಅಕ್ರಮವಾಗಿ ವಿವಿಧ ಬ್ರಾಂಡುಗಳ 214.560 ಲೀಟರ ಮದ್ಯ ಹಾಗೂ ವಿವಿಧ ಬ್ರಾಂಡುಗಳ 117.360 ಲೀಟರ ಬಿಯರನ್ನು ಹೊಂದಿ ಮಾರಾಟದ ಉದ್ದೇಶಕ್ಕಾಗಿ ಸಾಗಾಣಿಕೆ ಮಾಡುತ್ತಿರುವದನ್ನು ಪತ್ತೆ ಹಚ್ಚಿದ ಸಿ.ಪಿ.ಐ ಕವಿತಾ ನೇತೃತ್ವದ ಅಬಕಾರಿ ತನಿಖಾ‌ ತಂಡವು ಕಾರಿನ‌ ಸಮೇತ ಮದ್ಯವನ್ನು ವಶಕ್ಕೆ ಪಡೆದಿದೆ.

ಪ್ರಕರಣದಲ್ಲಿ ಅಬಕಾರಿ ಕಾಯ್ದೆ 1965 ಕಲಂ 11, 14, ಹಾಗೂ 15ರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಕಲಂ 32(1) ಕಲಂ 38(ಎ)ರ ಪ್ರಕಾರ ಜಪ್ತಿಯಾದ ಮದ್ಯ ಹಾಗೂ ಬೀರ ಮುದ್ದೇಮಾಲಿನ ಮೌಲ್ಯ 1,54,952 ರೂ. ಹಾಗೂ 3 ಲಕ್ಷ ರೂ. ಮೌಲ್ಯದ ಮಾರುತಿ ಸುಜಕಿ ಈಕೋ ಕಾರ್ ಜಪ್ತಿ ಮಾಡಲಾಗಿದೆ. ಅಕ್ರಮ‌ ಮದ್ಯ ಸಾಗಣೆ ಹಿನ್ನೆಲೆಯಲ್ಲಿ ಕಾರ್ ಚಾಲಕ ಯಡ್ರಾಮಿ ತಾಲೂಕಿನ ರವಿಕುಮಾರ ತಂದೆ ಚಂದ್ರಾಮ ಹುಣಚಾಳ ಇವರ ವಿರುದ್ಧ ಅಬಕಾರಿ‌ ಇಲಾಖೆಯ ಕಲಬುರಗಿ ಉಪ ವಿಭಾಗ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ‌ ಮುಂದುರೆಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments