ಹಾವೇರಿ : ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ಹಾವೇರಿ ಜಿಲ್ಲೆಯ ಮಹಿಳೆ ಫ್ರಿಡ್ಜ್ ಖರೀದಿಸಿ ಪೂಜೆಗೈದಿರು ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಫಲಾನುಭವಿ ಲತಾ ಎಂಬ ಮಹಿಳೆ ಗೃಹಲಕ್ಷ್ಮೀ ಯೋಜನೆ ಜಾರಿಯಾದಾಗಿನಿಂದಲೂ ಪ್ರತಿ ತಿಂಗಳು ಬರುತ್ತಿದ್ದ 2000 ರೂ. ಹಣ ಕೂಡಿಟ್ಟಿದ್ದರು. ಇದೀಗ ಯುಗಾದಿ ಹಬ್ಬಕ್ಕೆ ಒಟ್ಟು ಹಣ ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ.
17,500 ರೂಪಾಯಿ ಬೆಲೆಯ ಫ್ರಿಡ್ಜ್ ಖರೀದಿಸಿ ಜನರ ಗಮನ ಸೆಳೆದಿದ್ದಾರೆ. ಫ್ರಿಡ್ಜ್ ಖರೀದಿಸಿದ ಬಳಿಕ ಗೃಹಲಕ್ಷ್ಮೀ ಫಲಾನುಭವಿ ಎಂದು ಫ್ರಿಡ್ಜ್‌ಗೆ ಲಿಖಿತ ಫಲಕವನ್ನೂ ಸಹ ಈ ಮಹಿಳೆ ಹಾಕಿದ್ದಾರೆ. ಗೃಹಲಕ್ಷ್ಮೀ ಹಣ ಯಾವುದಕ್ಕೆ ಸಾಲೋದಿಲ್ಲ ಎಂಬುವವರಿಗೆ ಇವರು ಸರಿಯಾದ ಉತ್ತರವನ್ನು ನೀಡಿದ್ದಾರೆ.