ವಿಜಯನಗರ : ತಡರಾತ್ರಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆ ನೆಲಕ್ಕುರುಳಿರುವಂತಹ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಟ್ಟಮ್ಮನಹಳ್ಳಿ ಗ್ರಾಮದ ಮೂಗಪ್ಪ ಎಂಬುವರಿಗೆ ಸೇರಿದ್ದ 5 ಎಕರೆಯಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದರು. ಅಂದಾಜು 5 ರಿಂದ 7 ಲಕ್ಷ ರೂಪಾಯಿ ಬೆಲೆ ಬಾಳುವ ಪಪ್ಪಾಯಿ ಬೆಳೆ ನೆನ್ನೆ ರಾತ್ರಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಪಪ್ಪಾಯಿ ಗಿಡ ನೆಲಕ್ಕುರುಳಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಅಷ್ಟೇ ಅಲ್ಲದೇ ಅದೇ ಗ್ರಾಮದ ಪತ್ರಿಗೌಡ ಹೊನ್ನೆಹಳ್ಳಿ ಎನ್ನುವವರ 3 ಎಕರೆ, ಹಾಗೂ ಕುಸುಮ ಎನ್ನುವವರ 4 ಎಕರೆ ಪಪ್ಪಾಯಿ ಬೆಳೆ ಹಾನಿಯಾಗಿದ್ದು ಅಪಾರ ಪ್ರಮಾಣದ ನಷ್ಟ ಎದುರಾಗಿರುವಂತಹ ಸಂದರ್ಭ ಎದುರಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಾಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಬೆಳೆ ನಷ್ಟಕ್ಕೀಡಾದ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.


