Wednesday, April 30, 2025
32 C
Bengaluru
LIVE
ಮನೆಕ್ರಿಕೆಟ್T20 World Cup 2024: ಈ ಬಾರಿ ‘ಡಾಟ್ ಬಾಲ್’ ವಿಶ್ವಕಪ್..!

T20 World Cup 2024: ಈ ಬಾರಿ ‘ಡಾಟ್ ಬಾಲ್’ ವಿಶ್ವಕಪ್..!

T20 World Cup 2024 : ಟಿ20 ಕ್ರಿಕೆಟ್ ಅಂದ್ರೆನೇ ಅಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆಯಾಗುತ್ತಿರುತ್ತವೆ. ಇದಕ್ಕೆ ತಾಜಾ ಸಾಕ್ಷಿ ಈ ಬಾರಿಯ ಐಪಿಎಲ್ ​. ಏಕೆಂದರೆ ಐಪಿಎಲ್ ಸೀಸನ್ 17 ರಲ್ಲಿ ಬರೋಬ್ಬರಿ 1260 ಸಿಕ್ಸ್​ಗಳು ಸಿಡಿದಿದ್ದವು. ಆದರೆ ಇದೇ ಸಿಡಿಲಬ್ಬರವನ್ನು ಟಿ20 ವಿಶ್ವಕಪ್​​ನಲ್ಲಿ ನಿರೀಕ್ಷಿಸುವಂತಿಲ್ಲ. ಏಕೆಂದರೆ ಟಿ20 ವಿಶ್ವಕಪ್​ನ ಮೊದಲ 6 ಪಂದ್ಯಗಳಲ್ಲೇ ಎರಡು ಮ್ಯಾಚ್​ಗಳು ಡಾಟ್​ ಬಾಲ್​ಗಳಿಂದಲೇ ಗಮನ ಸೆಳೆದಿವೆ.

ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತೀ ಹೆಚ್ಚು ಡಾಟ್ ಎಸೆದಿರುವ ದಾಖಲೆ ಸೌತ್ ಆಫ್ರಿಕಾ-ಶ್ರೀಲಂಕಾ ತಂಡಗಳ ಪಾಲಾಗಿದೆ. ಈ ಬಾರಿಯ ಟಿ20 ವಿಶ್ವಕಪ್​ನ 4ನೇ ಪಂದ್ಯದಲ್ಲಿ ಬರೋಬ್ಬರಿ 127 ಡಾಟ್​ ಬಾಲ್​ಗಳನ್ನು ಆಡಲಾಗಿದೆ. ನ್ಯೂಯಾರ್ಕ್​ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 19.1 ಓವರ್​ಗಳಲ್ಲಿ ಕೇವಲ 77 ರನ್​ ಗಳಿಸಿ ಆಲೌಟ್ ಆಗಿತ್ತು. ಇನ್ನು 78 ರನ್​ಗಳ ಗುರಿ ಬೆನ್ನತ್ತಲು ಸೌತ್ ಆಫ್ರಿಕಾ 16.2 ಓವರ್​ಗಳನ್ನು ತೆಗೆದುಕೊಂಡಿದ್ದರು.

ಅಂದರೆ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡುವ ಮೂಲಕ ಒಟ್ಟು 35.3 ಓವರ್​ಗಳಲ್ಲಿ ಬರೋಬ್ಬರಿ 127 ಡಾಟ್​​ ಬಾಲ್​ಗಳನ್ನು ಆಡಿದ್ದರು. ಇದುವೇ ಈಗ ವಿಶ್ವ ದಾಖಲೆಯಾಗಿ ಮಾರ್ಪಟ್ಟಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಬಲಿಷ್ಠ ದಾಂಡಿಗರನ್ನು ಹೊಂದಿರುವ ಸೌತ್ ಆಫ್ರಿಕಾ ತಂಡವೇ ಈ ಡಾಟ್ ಬಾಲ್ ದಾಖಲೆಯಲ್ಲಿ ಪಾಲುದಾರರಾಗಿರುವುದು.

ಹಾಗೆಯೇ ಈ ಬಾರಿಯ ವಿಶ್ವಕಪ್​ನಲ್ಲಿ ನಡೆದ ನಮೀಬಿಯಾ ಹಾಗೂ ಒಮಾನ್ ನಡುವಣ ಪಂದ್ಯದಲ್ಲೂ ಡಾಟ್​ ಬಾಲ್​ಗಳದ್ದೇ ಕಾರು ಬಾರು. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಒಮಾನ್ ತಂಡ 19.4 ಓವರ್​ಗಳಲ್ಲಿ 109 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಲು ನಮೀಬಿಯಾ 20 ಓವರ್​ಗಳನ್ನು ತೆಗೆದುಕೊಂಡಿದ್ದರು.

ಅಂದರೆ ಒಟ್ಟು 39.4 ಓವರ್​ಗಳ ಈ ಪಂದ್ಯದಲ್ಲಿ ಒಟ್ಟು 123 ಡಾಟ್​ ಬಾಲ್​ಗಳು ಮೂಡಿಬಂದಿದ್ದವು. ಅಂದರೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಆಡಲಾದ ಎರಡು ಪಂದ್ಯಗಳು ಟಿ20 ವಿಶ್ವಕಪ್​ನ ಅತೀ ಹೆಚ್ಚು ಡಾಟ್ ಬಾಲ್​ಗಳ ಮ್ಯಾಚ್​ಗೆ ಸಾಕ್ಷಿಯಾಗಿದೆ.

ಹೀಗಾಗಿ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಮತ್ತು ಬಾರ್ಬಡೋಸ್ ಮೈದಾನದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಪಂದ್ಯಗಳಲ್ಲಿ ಮತ್ತಷ್ಟು ಡಾಟ್ ಬಾಲ್​ಗಳನ್ನು ನಿರೀಕ್ಷಿಸಬಹುದು. ಅಲ್ಲದೆ ಈ ಬಾರಿ ಬರೀ ಹೊಡಿಬಡಿ ಆಟವನ್ನು ಸಹ ನಿರೀಕ್ಷಿಸುವಂತಿಲ್ಲ. ಬದಲಾಗಿ ಡಾಟ್ ಬಾಲ್​ಗಳ ಮೂಲಕ ಬೌಲರ್​ಗಳು ಕೂಡ ಇಡೀ ಪಂದ್ಯದ ಚಿತ್ರಣವನ್ನು ಬದಲಿಸುವುದನ್ನು ಎದುರು ನೋಡಬಹುದು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments