ಕ್ರೈಂ ಸ್ಟೋರಿಸುದ್ದಿ

ಮಕ್ಕಳನ್ನು ಕೊಂದ ಬಳಿಕ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ಏನಿದೆ ಗೊತ್ತಾ?

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಕೊಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಆರೋಪಿಸಿದ್ದಾಳೆ. ಮೃತರನ್ನು ಅಶ್ವಿನಿ ನಿಕುಂಭ್‌ (30) ಮತ್ತು ಮಕ್ಕಳಾದ ಆರಾಧ್ಯಾ (8) ಹಾಗೂ ಅಗಸ್ತ್ಯ (2) ಎಂದು ಗುರುತಿಸಲಾಗಿದೆ.

ಅಶ್ವಿನಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಕ್ಕಳಿಗೆ ವಿಷ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಶ್ವಿನಿ ಕೋನಾರ್ಕ್‌ ನಗರದ ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಘಟನೆ ಸ್ಥಳಕ್ಕೆ ತಲುಪಿದ ಪೊಲೀಸರಿಗೆ ಬಳಿಕ ಆಕೆಯ ಮಕ್ಕಳ ಶವವೂ ಕಂಡು ಬಂದಿತ್ತು. ಈ ವೇಳೆ ಆಕೆಯ ಪತಿ ಊರಿನಲ್ಲಿ ಇರಲಿಲ್ಲ. ಹೀಗಾಗಿ ಆಕೆಯೇ ಮಕ್ಕಳಿಗೆ ವಿಷ ಉಣಿಸಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಊಹಿಸಿದ್ದಾರೆ.

ಪರಿಶೀಲನೆ ವೇಳೆ ಪೊಲೀಸರಿಗೆ ಅಶ್ವಿನಿ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್‌ ಪತ್ತೆಯಾಗಿದೆ. ಇದರಲ್ಲಿ ಆಕೆ ಪತಿ ಸ್ವಪ್ನಿಲ್‌ ಕಿರುಕುಳ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾಳೆ.‌ ಜತೆಗೆ ಸಾಯುವ ಮುನ್ನ ವಿಡಿಯೊವನ್ನು ರೆಕಾರ್ಡ್‌ ಮಾಡಿದ್ದಾಳೆ. ಸ್ವಪ್ನಿಲ್‌ ನಿರಂತರ ಹಿಂಸೆ ನೀಡುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಆಕೆ ತನ್ನ ಸಂಬಂಧಿಕರಿಗೆ ಕಳುಹಿಸಿದ ವಿಡಿಯೊದಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಕೃತ್ಯ ನಡೆಯುವ ವೇಳೆ ಸ್ವಪ್ನಿಲ್‌ ಕೆಲಸದ ನಿಮಿತ್ತ ಪುಣೆಗೆ ತೆರಳಿದ್ದರು. ಸದ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

Comments (0)

Your email address will not be published. Required fields are marked *

Back to top button