ಕಲಬುರಗಿ : ಕಾರಾಗೃಹದ ಮೇಲೆ ಪೊಲೀಸ್ ದಾಳಿ ನಡೆದಿರುವಂತಹ ಘಟನೆ ಕಲಬುರಗಿ ಸೆಂಟ್ರಲ್ ಜೈಲ್ನಲ್ಲಿ ನಡೆದಿದೆ. ಕಲಬುರಗಿ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲ್ನಲ್ಲಿ ಲೋಕಸಭಾ ಚುನಾವಣೆ ಹೊತ್ತಲ್ಲೇ ದಾಳಿ ಮಾಡಲಾಗಿದೆ.
ಜೈಲಿನಿಂದಲೆ ಆಪರೇಟ್ ಮಾಡುವ ಹಿನ್ನಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಪೊಲೀಸ್ ದಾಳಿ ವೇಳೆ ಖೈದಿಗಳ ಬಳಿ ಗುಟ್ಕಾ ಮತ್ತು ನಗದು ಹಣ ಪತ್ತೆಯಾಗಿದ್ದು, ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.