Wednesday, April 30, 2025
30.3 C
Bengaluru
LIVE
ಮನೆಕ್ರೈಂ ಸ್ಟೋರಿಎರಡು ಕೊಲೆಯಾದರೂ ಎಚ್ಚೆತ್ತುಕೊಳ್ಳದ ಹುಬ್ಬಳ್ಳಿ ಪೊಲೀಸ್​: ಅರೆ ಬೆತ್ತಲೆಗೊಳಿಸಿ ಮಹಿಳೆ ಮೇಲೆ ಗುಂಪೊಂದು ಹಲ್ಲೆ

ಎರಡು ಕೊಲೆಯಾದರೂ ಎಚ್ಚೆತ್ತುಕೊಳ್ಳದ ಹುಬ್ಬಳ್ಳಿ ಪೊಲೀಸ್​: ಅರೆ ಬೆತ್ತಲೆಗೊಳಿಸಿ ಮಹಿಳೆ ಮೇಲೆ ಗುಂಪೊಂದು ಹಲ್ಲೆ

ಹುಬ್ಬಳ್ಳಿ: ನೇಹಾ ಮತ್ತು ಅಂಜಲಿ ಕೊಲೆ ನಡೆದ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಚ್ಚಿ ಬಿದ್ದಿದೆ. ಎರಡು ಕೊಲೆಗಳ ನಡೆದ ಬಳಿಕ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆಯಾ ಅನ್ನೋ ಪ್ರಶ್ನೆ ಮೂಡಿತ್ತು. ಅಂಜಲಿ ಕೊಲೆಯಾದ ಬಳಿಕ ನಾಲ್ಕು ಪೊಲೀಸರ ಅಮಾನತ್ತು ಆಗಿದ್ದಾರೆ. ಇಷ್ಟಾದರೂ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಸರಿದಾರಿಗೆ ಬರೋ ತರಹ ಕಾಣುತ್ತಿಲ್ಲ. ಏಕೆಂದರೆ ಹಾಡು ಹಗಲೆ ಓರ್ವ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ.

ಹುಬ್ಬಳ್ಳಿಯ ಮಾರುತಿ ನಗರದ ಸೆಕೆಂಡ್ ಕ್ರಾಸ್ ಬಳಿ ಖಾಸಗಿ ಆಸ್ಪತ್ರೆ ಹತ್ತಿರ, ಮೇ 25 ರಂದು ಸಾಯಂಕಾಲ ಕ್ಷುಲ್ಲಕ ಕಾರಣಕ್ಕೆ ಎಲಿಜಿಬತ್ ಎಂಬ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲೇ ಅರೆ ಬೆತ್ತಲೆಗೊಳಿಸಿ ಎಂಟು ಜನರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ ಕಾಳೆ, ಸಾಗರ, ನಾಗರತ್ನ, ಪೂಜಾ, ಸೀನು, ರೇಣುಕಾ, ಶಾಂತಮ್ಮಾ ಹಾಗೂ ರಾಜೇಶ್ವರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್ನು ಎಲಿಜಿಬತ್ ಮಹಿಳೆ ಹಲ್ಲೆ ಮಾಡಿದವರಲ್ಲಿ ಮಾರುತಿ ನಗರದ‌ ನಿವಾಸಿ ರಾಜೇಶ್ವರಿ ಎಂಬವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನ ಇನ್ನೂ ಪತ್ತೆ ಮಾಡಿಲ್ಲ. ಯಾಕೆ ಎಂಬುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅವಮಾನ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖಿಸಿಲಾಗಿದೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಐಪಿಸಿ 323, 324, 307, 341, 504, ಹಾಗೂ 506 ಅಡಿಯಲ್ಲಿ ಎಂಟು ಜನರ ವಿರುದ್ದ ದೂರು ದಾಖಲಾಗಿದೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments