ಕೊಡಗು : ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಕೊಂದು ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನೇಣುಬಿಗಿದ ಸ್ಥಿತಿಯಲ್ಲಿ ಆರೋಪಿ ಪ್ರಕಾಶ್(35) ಮೃತದೇಹ ಪತ್ತೆಯಾಗಿದೆ. ಕೊಲೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಶೋಧಕಾರ್ಯ ಮಾಡುವ ಸಮಯದಲ್ಲಿ ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ. ಇನ್ನು ಬಾಲಕಿಯ ರುಂಡಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಕಳೆದೊಂದು ವರ್ಷದಿಂದ ಆರೋಪಿ ಪ್ರಕಾಶ್, ಮೀನಾಳ ಹಿಂದೆಯೇ ಸುತ್ತುತ್ತಿದ್ದನಂತೆ. ಇವರಿಬ್ಬರೂ ಪ್ರೀತಿಸುತ್ತಾ ಇದ್ದುದ್ದು ಇಡೀ ಊರಿಗೆ ಗೊತ್ತಿತ್ತು. ಇವರಿಬ್ಬರ ಆತ್ಮೀಯತೆ ಎಷ್ಟಿತ್ತೆಂದರೆ ಈತನೇ ತನ್ನ ಬೈಕಿನಲ್ಲಿ ಮೀನಾಳನ್ನ ಮನೆಯಿಂದ ಶಾಲೆಗೆ ಡ್ರಾಪ್ ಮಾಡುವುದು, ಊರೂರು ಸುತ್ತುವುದು, ಬಸ್ಸಿನಲ್ಲೂ ಮಡಿಕೇರಿ ಹೋಗಿ ಬರುವುದು ಮಾಡುತ್ತಿದ್ದರು. ಎಷ್ಟೋ ಬಾರಿ ಈತ ಈಕೆಯ ಮನೆಗೂ ಬಂದು ಹೋಗಿದ್ದನಂತೆ.

ಈ ಮಧ್ಯೆ ಎಸ್​ಎಸ್​ಎಲ್​ಸಿ ಹೋಗುವುದನ್ನ ಬಿಟ್ಟಿದ್ದ ಈಕೆ, ಪ್ರಕಾಶ್​ ಜೊತೆ ಸುತ್ತುವುದು ಹೆಚ್ಚು ಮಾಡಿದ್ದಳು ಎನ್ನಲಾಗುತ್ತಿದೆ. ಆದ್ರೆ, ಎರಡು ತಿಂಗಳ ಹಿಂದೆ ಅದೇನೋ ಮನಸ್ಸಾಗಿ ತಿರುಗಿ ಶಾಲೆಗೆ ಬಂದಿದ್ದಳು. ಪರೀಕ್ಷೆ ಬರೆಯುವುದಾಗಿ ಶಿಕ್ಷಕರಿಗೆ ಹೇಳಿದ್ದಳು. ಅದರಂತೆ ಶಿಕ್ಷಕರೂ ಈಕೆಗೆ ಪಾಠ ಮಾಡಿದ್ದರು. ಚೆನ್ನಾಗಿಯೇ ಓದಿದ್ದ ಈಕೆ, ನಿನ್ನೆ ಪ್ರಕಟಗೊಂಡ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಳು. ಅಷ್ಟರಲ್ಲಿಯೇ ಈ ದುರಂತ ಸಂಭವಿಸಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights