ನವದೆಹಲಿ : ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್‌ನ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮುಸ್ಲಿಂ ಯುವಕನೊಬ್ಬ ಬಿಹಾರದ ಹಿಂದೂ ಯುವತಿಯ ಬಳಿ ತಾನು ರಾಣಾ ಎಂಬ ಹಿಂದೂ ಯುವಕ ಎಂದು ಹೇಳಿಕೊಂಡಿದ್ದಾನೆ. ತನ್ನ ಗುರುತನ್ನು ಸುಳ್ಳು ಹೇಳಿ ಲವ್ ಜಿಹಾದ್‌ಗೆ ಸಿಕ್ಕಿಹಾಕಿಸಿ, ಅವಳೊಂದಿಗೆ ಪ್ರಣಯ ಸಂಬಂಧವನ್ನು ಪ್ರಾರಂಭಿಸಿ ನಂತರ ರಾಯ್ಬರೇಲಿಯ ದರ್ಗಾಕ್ಕೆ ಕರೆತಂದಿದ್ದಾನೆ.
ಈ ವಿಷಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುನ್ನಿ ನಗರಕ್ಕೆ ಸಂಬಂಧಿಸಿದೆ. ಆರೋಪಿಯು ಗುರ್ಗಾಂವ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತೆಯ ಬಳಿಗೆ ಬಂದು ತನ್ನನ್ನು ರಾಣಾ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಆಕೆಯನ್ನು ಪ್ರೀತಿಸುವಂತೆ ಆಮಿಷವೊಡ್ಡಿದ್ದ. ವರದಿಗಳ ಪ್ರಕಾರ, ಅವಳು ದೆಹಲಿಯಲ್ಲಿ ಬಾಡಿಗೆ ಸ್ಥಳದಲ್ಲಿ ಉಳಿದುಕೊಂಡಿದ್ದಳು. ಅವನು ಸಹ ಅಲ್ಲೇ ಹತ್ತಿರದಲ್ಲೇ ವಾಸಿಸುತ್ತಿದ್ದನು. ರಾಣಾ ಎಂದು ಹೇಳಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿ ಕ್ರಮೇಣ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ನಂತರ ಅವನು ಸುಮಾರು ಒಂದೂವರೆ ವರ್ಷಗಳ ಹಿಂದೆ ಬಹೇರಿಯಲ್ಲಿರುವ ತನ್ನ ನಿವಾಸಕ್ಕೆ ಅವಳನ್ನು ಕರೆದೊಯ್ದಿದ್ದ. ನಂತರ ಆತ ದರ್ಗಾದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದ್ದ. ಅಲ್ಲಿ ಅವಳನ್ನು ಮದುವೆಯಾಗಿದ್ದ.
ಮದುವೆಯ ನಂತರ ತನಗೆ ಥಳಿಸಿ ಚಿತ್ರಹಿಂಸೆ ನೀಡಲಾಯಿತು ಎಂದು ಮಹಿಳೆ ಹೇಳಿದ್ದಾಳೆ. ಅವಳು ಗರ್ಭಿಣಿಯಾದಾಗ ಮಗುವನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಲಾಯಿತು. ಒಂದು ದಿನ ಆಕೆಯ ಗಂಡನ ತಮ್ಮ ಅವಳ ಕೋಣೆಗೆ ಪ್ರವೇಶಿಸಿ ಅತ್ಯಾಚಾರ ಮಾಡಿದನು. ಮನೆಗೆ ಬಂದ ಬಳಿಕ ಪತಿಗೆ ಈ ವಿಷಯ ಹೇಳಿದಾಗ ಬಾಯಿ ಮುಚ್ಚಿಕೊಳ್ಳುವಂತೆ ಬೆದರಿಸಿದ್ದು, ಯಾರಿಗಾದರೂ ಹೇಳಿದರೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡುವುದಾಗಿ ಹೆದರಿಸಿದ್ದಾರೆ. ನಂತರ ಅವಳು ಬಹೇರಿ ಪೊಲೀಸ್ ಠಾಣೆಗೆ ಬಂದು ಎಲ್ಲ ವಿಷಯವನ್ನೂ ತಿಳಿಸಿದ್ದಾರೆ. ಗಂಡನ ವಿರುದ್ಧ ದೂರು ನೀಡಿದ್ದಾರೆ.


