ಕ್ರೈಂ ಸ್ಟೋರಿಸುದ್ದಿ

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ ; ಹರಿಯಾಣದ ಇಬ್ಬರ ಬಂಧನ

ನವದೆಹಲಿ : ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮೂಲದ ಕರ್ನಾಲ್‌ನ ಇಬ್ಬರು ಸಹೋದರರನ್ನು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಬಂಧಿಸಲಾಗಿದೆ.  ಹತ್ಯೆಗೀಡಾದ ಕರ್ನಾಲ್ ಮೂಲದ ವಿದ್ಯಾರ್ಥಿ ಆಸ್ಟ್ರೇಲಿಯಾದಲ್ಲಿ ಎಂಟೆಕ್ ಪದವಿ ಓದುತ್ತಿದ್ದರು.

 

ವಿಕ್ಟೋರಿಯಾ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಮಂಗಳವಾರ ಬೆಳಿಗ್ಗೆ ಗೌಲ್ಬರ್ನ್‌ನಲ್ಲಿ ಅಭಿಜಿತ್ (26) ಮತ್ತು ರಾಬಿನ್ ಗಾರ್ಟನ್ (27) ಎಂಬ ಇಬ್ಬರನ್ನು ಬಂಧಿಸಲಾಗಿದೆ. ದಿ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಕೊಲೆ ಮಾಡಿರುವ ಸಹೋದರರು ಕರ್ನಾಲ್‌ನ ಬಸ್ತಾರಾ ಗ್ರಾಮದ ನಿವಾಸಿಗಳಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿದೆ. ಬಳಿಕ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.

 

 

Comments (0)

Your email address will not be published. Required fields are marked *

Back to top button