ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶನಿವಾರ ಭೂಕುಸಿತದಿಂದಾಗಿ ಬಂಡೆಗಳು ಬಿದ್ದು ಹೈದರಾಬಾದ್‌ನ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ. ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೌಚಾರ್ ಮತ್ತು ಕರ್ಣಪ್ರಯಾಗ ನಡುವಿನ ಚಟ್ವಾಪೀಪಾಲ್ ಬಳಿ ದುರ್ಘಟನೆ ಸಂಭವಿಸಿದೆ.
ನಿರ್ಮಲ್ ಶಾಹಿ (36ವ) ಮತ್ತು ಸತ್ಯ ನಾರಾಯಣ (50ವ) ಅವರು ಬೈಕ್ ನಲ್ಲಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಬೆಟ್ಟದಿಂದ ಉರುಳುತ್ತಿದ್ದ ಬಂಡೆಗಳ ಇಬ್ಬರ ಮೇಲೆ ಬಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ, ಭೂಕುಸಿತದ ಅವಶೇಷಗಳಿಂದ ಹೊರತೆಗೆಯಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗಡಿ ರಸ್ತೆಗಳ ಸಂಸ್ಥೆ ಸಿಬ್ಬಂದಿ ರಸ್ತೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭೂಕುಸಿತದಿಂದಾಗಿ ರುದ್ರಪ್ರಯಾಗ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯೂ ಬಂದ್ ಆಗಿದೆ. ಇಂದು ಮತ್ತು ನಾಳೆ ಭಾನುವಾರದಂದು ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳೆರಡಕ್ಕೂ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.


