ಬೆಳಗಾವಿ : ಕರ್ನಾಟಕ, ಗೋವಾ, ಮಹಾರಾಷ್ಟ್ರ ಮಧ್ಯೆ ಇರುವ ಜಲ ವಿವಾದ ಇದೀಗ ಮತ್ತೆ ಶುರುವಾಗಿದೆ. ಮಹದಾಯಿ ಯೋಜನೆಗೆ ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ ಶುರು ಮಾಡಿದೆ. ಹೀಗಾಗಿ ಯೋಜನೆ ಸಂಬಂಧ ಕೇಂದ್ರದ ಮೇಲೆ ಗೋವಾ ಸಿಎಂ ಒತ್ತಡ ಹಾಕಿದ್ದಾರೆ. ಈ ಸಂಬಂಧ ಗೋವಾ ಸರ್ಕಾರದ ಒತ್ತಡದಿಂದ ಮಹದಾಯಿ ಪ್ರವಾಹ ತಂಡ ಕಣಕುಂಬಿಗೆ ಭೇಟಿ ಕೊಡುತ್ತಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
2018 ರಲ್ಲಿಯೇ ಮಹದಾಯಿ ನ್ಯಾಯಾಧೀಕರಣದಿಂದ ತೀರ್ಪು ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ 13 ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಕಳಸಾದಿಂದ 1.72 ಟಿಎಂಸಿ, ಬಂಡೂರಿಯಿಂದ 2.18 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು.
ಮಹದಾಯಿ ತೀರ್ಪು ಬಂದು 6 ವರ್ಷ ಕಳೆದರೂ ಒಂದೇ ಒಂದು ಹನಿ ನೀರು ಕರ್ನಾಟಕಕ್ಕೆ ಸಿಕ್ಕಿಲ್ಲ. ನಾಲ್ಕು ಜಿಲ್ಲೆಯ 13 ತಾಲೂಕಿನ ಜನತೆಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಪರಿಸರ ಇಲಾಖೆ ಅನುಮತಿ ಕರ್ನಾಟಕಕ್ಕೆ ಸಿಗದಂತೆ ತಡೆಯಲು ಗೋವಾ ಸರ್ಕಾರದ ಹುನ್ನಾರ ಮಾಡಿತ್ತು. ಇದೇ ಕಾರಣಕ್ಕೆ ಮಹದಾಯಿ ತೀರ್ಪು ಬಂದ್ರು ಪ್ರವಾಹ ತಂಡದ ನೆಪದಲ್ಲಿ ಯೋಜನೆಗೆ ಮತ್ತೆ ಅಡ್ಡಗಾಲು ಹಾಕಲಾಗುತ್ತಿದೆ.