
ಬೆಂಗಳೂರು : ಅತ್ಯಾಚಾರ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಿಸಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲೆ ಖಾತ್ರಿಯಾಗಿದೆ. ಜಾಮೀನು ಅರ್ಜಿ ವಜಾಗೊಳಿಸಿರುವ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಗೆ ಜೂನ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಳೆದ ಎಂಟು ದಿನಗಳಿಂದ ಎಸ್ ಐಟಿ ವಶದಲ್ಲಿದ್ದ ಪ್ರಜ್ವಲ್ ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲೇಬೇಕಾಗಿದೆ. ಪ್ರಜ್ವಲ್ ಆರೋಗ್ಯ ಚೆನ್ನಾಗಿದ್ದು ಅವರು ಯಾವುದೇ ಕಾರಣ ಕೊಟ್ಟು ಆಸ್ಪತ್ರೆವಾಸ ಕೂಡಾ ಮಾಡುವಂತಿಲ್ಲ. ಇದೀಗ ಪ್ರಜ್ವಲ್ ಜೈಲು ಕಂಬಿ ಎಣಿಸಲೇಬೇಕಾಗಿದೆ. ಇಂದು ಎಸ್ ಐಟಿ ಪ್ರಜ್ವಲ್ ನನ್ನು ಕೋರ್ಟ್ ಗೆ ಹಾಜರುಪಡಿಸಿತ್ತು. ಜಡ್ಜ್ಮೆಂಟ್ ಹೊರಬೀಳುತ್ತಲೇ ಪೊಲೀಸರು ಪ್ರಜ್ವಲ್ನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು.




