ಬೆಂಗಳೂರು : ಡೆಂಗ್ಯೂ, ಚಿಕನ್ ಗುನ್ಯಾ, ಹಕ್ಕಿ ಜ್ವರ ಹೆಚ್ಚಾಗಿ ಜನರನ್ನು ಬಾಧಿಸುತ್ತಿದೆ. ಕೊರೊನಾ ನಂತರ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುವುದು ಕೊಂಚ ಕಡಿಮೆಯಾಗಿತ್ತು. ಇದೀಗ ಮತ್ತೆ ಹಂದಿ ರೋಗದ ಹಾವಳಿ ಹೆಚ್ಚಾಗಿದೆ. ಇದು ಹಂದಿಗಳಿಂದ ಜನರಿಗೆ ಹರಡುವುದಿಲ್ಲ. ಆದರೆ ಹಂದಿಗಳಿಗೆ ಬೇಗ ಹರಡುತ್ತದೆ.
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಕರ್ನಾಟಕಕ್ಕೂ ಆತಂಕ ಶುರುವಾಗಿದೆ. ಕೇರಳದ ತ್ರಿಶೂರ್ನಲ್ಲಿ ಹಂದಿ ಜ್ವರಪತ್ತೆಯಾಗಿದೆ. ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಬೇಗ ಸೋಂಕು ಹರಡುವ ಕಾರಣ ತ್ರಿಶೂರ್ ಜಿಲ್ಲೆಯ ಮಡಕ್ಕತಾರಾ ಪಂಚಾಯತ್ನ ಖಾಸಗಿ ಜಮೀನಿನಲ್ಲಿ 310 ಹಂದಿಗಳನ್ನು ಕೊಲ್ಲಲು ತ್ರಿಶೂರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೀನ್ಯಾದಲ್ಲಿ ಮೊದಲ ಪ್ರಕರಣ ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಸಾಕು ಹಂದಿಗಳಿಗೆ ಮಾರಣಾಂತಿಕವೆನಿಸಿದೆ. ಇದು ಮೊಟ್ಟಮೊದಲ ಬಾರಿ 1921ರಲ್ಲಿ ಕೀನ್ಯಾದಲ್ಲಿ ಪತ್ತೆಯಾಗಿತ್ತು. ಆದರೆ ಈ ರೋಗ ಹಂದಿಗಳಿಂದ ಮಾನವರಿಗೆ ಹರಡುವುದಿಲ್ಲ. ಇದನ್ನು ಮೊದಲು ಕೀನ್ಯಾ, ಪೂರ್ವ ಆಫ್ರಿಕಾ, 1921 ರಲ್ಲಿ ವಿವರಿಸಲಾಯಿತು. ಶೀಘ್ರದಲ್ಲೇ ದಕ್ಷಿಣ ಆಫ್ರಿಕಾ ಮತ್ತು ಅಂಗೋಲಾದಲ್ಲಿ ಹಂದಿಗಳನ್ನು ಕೊಲ್ಲುವ ರೋಗ ಎಂದು ಹೇಳಲಾಗಿತ್ತು.