ಬೆಂಗಳೂರು : ದರ್ಶನ್ ಕೊಲೆ ಪ್ರಕರಣಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು ಸಾಕಷ್ಟು ವೈರಲ್ ಆಗ್ತಿದೆ. ಒಬ್ಬ ಸ್ಟಾರ್ ತನ್ನ ಡೈ ಹಾರ್ಟ್ ಫ್ಯಾನ್ ಅನ್ನು ಬಳಸಿ ಇನ್ನೊಬ್ಬ ಅಭಿಮಾನಿಯನ್ನ ಕೊಂದಿದ್ದಾನೆ. “ಇದು ಸ್ಟಾರ್ ಆರಾಧನೆ ಸಿಂಡ್ರೋಮ್”ಎಂದಿದ್ಧಾರೆ ಆರ್ ಜಿವಿ.
ಇನ್ನು ಕಿಲ್ಲಿಂಗ್ ವೀರಪ್ಪನ್ ಸೇರಿದಂತೆ ಹಲವು ರಿಯಲ್ ಸ್ಟೋರಿಗಳನ್ನ ತೆರೆ ಮೇಲೆ ತಂದಿರುವ ರಾಮ್ ಗೋಪಾಲ್ ವರ್ಮಾ, ಸದ್ಯ ಸ್ಯಾಂಡಲ್ ವುಡ್ ಡೆವಿಲ್ ದರ್ಶನ್ ಮೇಲೆ ಕಣ್ಣಾಕಿದ್ದಾರೆ. ದರ್ಶನ್ ಕೊಲೆ ಕೇಸ್ ಇಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ RGV ಸುಳಿವು ನೀಡಿದ್ದಾರೆ . ಸದ್ಯ RGV ಈಗಾಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.