ಬೆಂಗಳೂರು : ಮಾಲಿನ್ಯವು ಜನರಿಗೆ ಮಾರಕವಾಗಿದೆ. ದೆಹಲಿ ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ ಪ್ರತಿ ವರ್ಷ ಸಾವಿರಾರು ಜನರು ವಾಯು ಮಾಲಿನ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ಅನೇಕ ನಗರಗಳಲ್ಲಿ ಮಾಲಿನ್ಯವು ಪರಿಣಾಮ ಬೀರುತ್ತಿದೆ.
ದೆಹಲಿಯಲ್ಲಿ ಪ್ರತಿ ವರ್ಷ ಸಂಭವಿಸುವ ಸಾವುಗಳಲ್ಲಿ ಸುಮಾರು 11.5 ರಷ್ಟು ವಾಯು ಮಾಲಿನ್ಯದಿಂದ ಸಂಭವಿಸುತ್ತವೆ ಎಂದು ಕಂಡುಬಂದಿದೆ. ವಿಷಕಾರಿ ಗಾಳಿಯಿಂದ ರಾಜಧಾನಿಯಲ್ಲಿ ಪ್ರತಿ ವರ್ಷ ಸುಮಾರು 12,000 ಜನರು ಸಾಯುತ್ತಿದ್ದಾರೆ.
ಮಾಲಿನ್ಯದಿಂದ ಸಾವನ್ನಪ್ಪಿರುವವರ ಪ್ರಮಾಣ ಮುಂಬೈ-5091 ಕೋಲ್ಕತ್ತಾ-5091 ಚೆನ್ನೈ-2870 ಅಹಮದಾಬಾದ್-2495 ಬೆಂಗಳೂರು-2102 ಹೈದರಾಬಾದ್-1597 ಪುಣೆ-1367 ವಾರಾಣಸಿ-831 ಶಿಮ್ಲಾ-59 ಶಿಮ್ಲಾದಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆ ಇದೆ. ಈ 10 ನಗರಗಳಲ್ಲಿ ಒಟ್ಟು ಸಾವಿನ ಶೇಕಡಾ 7.2 ರಷ್ಟು ಅಂದರೆ ಸುಮಾರು 33,000 ಜನರು ಪ್ರತಿ ವರ್ಷ ವಾಯು ಮಾಲಿನ್ಯದಿಂದ ಸಾಯುತ್ತಾರೆ ಎಂದು ಅಧ್ಯಯನ ಹೇಳಿದೆ. ಭಾರತದ ಈ 10 ನಗರಗಳಲ್ಲಿ PM 2.5 ಸಾಂದ್ರತೆಯು WHO ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ (ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳು) ಹೆಚ್ಚು ಎಂದು ಅಧ್ಯಯನವು ಕಂಡುಹಿಡಿದಿದೆ. ಸಂಶೋಧನೆಯು ಭಾರತದ ವಾಯು ಗುಣಮಟ್ಟದ ಮಾನದಂಡಗಳನ್ನು ಬಿಗಿಗೊಳಿಸಬೇಕೆಂದು ಕರೆ ನೀಡಿದೆ.