ಬೆಂಗಳೂರು : ಅಭಯ್ ವರ್ಮಾ ಮತ್ತು ಶಾರ್ವರಿ ಅಭಿನಯದ ಹಾರರ್-ಕಾಮಿಡಿ ಚಲನಚಿತ್ರ ʻಮುಂಜ್ಯʼ ಜೂನ್ 7 ರಂದು ತೆರೆ ಕಂಡಿತ್ತು. ಸ್ಟಾರ್ ಕಲಾವಿದರೇ ಇಲ್ಲದ ಸಿನಿಮಾವೊಂದು ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಹಿಂದಿ ಪ್ರೇಕ್ಷಕರ ವಲಯದಲ್ಲಿ ಕೂಡ ಈ ಸಿನಿಮಾ ಸದ್ದು ಮಾಡುತ್ತಿವೆ. ಬಹುತೇಕ ಚಿತ್ರಮಂದಿಗಳನ್ನು ‘ಕಲ್ಕಿ 2898 ಎಡಿ’ ಆವರಿಸಿಕೊಂಡಿದೆ. ಹಾಗಾಗಿ ಈ ಸಿನಿಮಾ ಬಿಡುಗಡೆ ಆದ ನಂತರ ‘ಮುಂಜ್ಯ’ ಕಲೆಕ್ಷನ್ ಕುಸಿದಿದೆ.
ಇದು ಭಾರತದ ಮೊದಲ CGI ನಾಯಕನನ್ನು ಒಳಗೊಂಡಿರುವ ಸಿನಿಮಾ ಎಂದು. ಸಿನಿಮಾ ಬಿಡುಗಡೆ ಮುಂಚೆ ಟೀಸರ್ ಬಿಡುಗಡೆಯಾಗಿದ್ದರೂ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಯಾವಾಗ ಥಿಯೇಟರ್‌ನಲ್ಲಿ ರಿಲೀಸ್ ಆಯ್ತೋ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.
`ಮುಂಜ್ಯಾʼ ಟೀಸರ್ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿತ್ತು. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿತ್ತು. ʻಮುಂಜ್ಯಾʼ ನಗರಕ್ಕೆ ಪ್ರವೇಶಿಸುವ , ಹಾಗೇ ಟಿವಿ ನೋಡುತ್ತಿದ್ದವ ಏಕಾಏಕಿ ಟಿವಿ ಆಫ್ ಮಾಡುವಾಗ ಕೋಪಗೊಂಡ ʻಮುಂಜ್ಯಾʼ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುವ ಸನ್ನಿವೇಶ ಟೀಸರ್‌ನಲ್ಲಿತ್ತು. ಮೇ 24 ರಂದು ಚಿತ್ರತಂಡ ಟ್ರೈಲರ್ ಅನಾವರಣಗೊಳಿಸಲಿದೆ. ಟೀಸರ್ ನೋಡಿದರೆ ಹಾರರ್ ಜತೆ ಕಾಮಿಡಿ ಕೂಡ ಇತ್ತು.

ಮುಂಜ್ಯ’ ಸಿನಿಮಾಗೆ ಮೊದಲ ದಿನ 4.21 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ 7.40 ಕೋಟಿ ರೂಪಾಯಿ ಗಳಿಕೆ ಆಯಿತು. ಮೂರನೇ ದಿನ 8.43 ಕೋಟಿ ರೂಪಾಯಿ ಹರಿದುಬಂತು. ನಂತರ ಪ್ರತಿ ದಿನ 3 ಅಥವಾ 4 ಕೋಟಿ ರೂಪಾಯಿ ಗಳಿಸುತ್ತಾ ಈ ಸಿನಿಮಾ ಮುನ್ನುಗ್ಗಿತು. ನಂತರದ ವಾರಾಂತ್ಯದಲ್ಲಿ ಕಲೆಕ್ಷನ್ ಹೆಚ್ಚಾಯಿತು. 25 ದಿನಗಳ ಯಶಸ್ವಿ ಪ್ರದರ್ಶನ ಕಂಡು ಈ ಸಿನಿಮಾದ ಒಟ್ಟು ಕಲೆಕ್ಷನ್ 100 ಕೋಟಿ ರೂಪಾಯಿ ಮೀರಿತ್ತು.
ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ ಮತ್ತು ಶಾರ್ವರಿ, ಅಭಯ್ ವರ್ಮಾ, ಮೋನಾ ಸಿಂಗ್ ಮತ್ತು ಬಾಹುಬಲಿ ಚಲನಚಿತ್ರ ಖ್ಯಾತಿಯ ಸತ್ಯರಾಜ್ ಅವರ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ನಿರೇನ್ ಭಟ್ ಅವರ ಚಿತ್ರಕಥೆ, ಯೋಗೇಶ್ ಚಂಡೇಕರ್ ಸಂಭಾಷಣೆ ಇದೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಇದೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಮುಂಜ್ಯವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ನಿರ್ಮಿಸಿದ್ದಾರೆ. ಇದೀಗ ಕಲ್ಕಿ ಬಿಡುಗಡೆಯಾದ ಕಾರಣ ಸಿನಿಮಾ ಕಲೆಕ್ಷನ್‌ನಲ್ಲಿ ಭಾರಿ ಹೊಡೆತ ಬಿದ್ದಿದಂತಾಗಿದೆ.


