ಬೆಂಗಳೂರು : ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಕಾವೇರಿ 5ನೇ ಹಂತದ ಯೋಜನೆಯ ಸಿಪಿ 04 ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಮೇ 8 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ವಿದ್ಯುತ್ ಸಂಬಂಧಿತ ಕಾಮಗಾರಿ ಹಿನ್ನೆಲೆ, ಮೇ 08 ರಂದು ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ 5ನೇ ಹಂತದ ಜಲರೇಚಕ ಯಂತ್ರಗಾರಗಳು 1 ಗಂಟೆಗಳ ಕಾಲ ಸ್ಥಗಿತವಾಗಲಿದೆ.
ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜಿನಲ್ಲಿ ಶೇ. 5 ರಷ್ಟು ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ. ಕಾವೇರಿ 5ನೇ ಹಂತದ ಯೋಜನೆಯ ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಘಟಕ ವ್ಯಾಪ್ತಿಯಿಂದ ಪೂರೈಕೆ ಆಗುತ್ತಿದ್ದ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆ ಆಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಾರಣ ಮೇ 8ರಂದು ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಲು ಮನವಿ ಮಾಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 5ನೇ ಹಂತದ ಯೋಜನೆಯ ಸಿಪಿ4 ಕಾಮಗಾರಿ ನಡೆಸಲಿದೆ.
ರಣ ಬಿಸಿಲಿಗೆ ಬಸವಳಿದಿರುವ ಕರುನಾಡಿಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಸತತ ಮೂರು ವಾರಗಳ ಕಾಲ ಮಳೆ ಬರಲಿದೆ.