ಕ್ರಿಕೆಟ್ಸುದ್ದಿ

ಐಪಿಎಲ್ ಪಂದ್ಯದ ವೇಳೆ ಎಂಎಸ್ ಧೋನಿ ಭೇಟಿಗೆ ಮೈದಾನಕ್ಕೆ ನುಗ್ಗಿದ ಯುವಕನ ಬಂಧನ !

ಅಹಮದಾಬಾದ್ : ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಯ ಪಂದ್ಯದ ವೇಳೆ ಎಂಎಸ್ ಧೋನಿ ಅವರನ್ನು ಭೇಟಿ ಮಾಡಲು ಮೈದಾನಕ್ಕೆ ನುಗ್ಗಿದ ನಂತರ ಕ್ರಿಮಿನಲ್ ಅತಿಕ್ರಮಣ ಮತ್ತು ಅಕ್ರಮ ಪ್ರವೇಶಕ್ಕಾಗಿ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ನಡೆದ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.

ಆರೋಪಿ ವಿದ್ಯಾರ್ಥಿ ವಿರುದ್ಧ ಅತಿಕ್ರಮ ಮತ್ತು ಅಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ ಎಂದು ಅಹಮದಾಬಾದ್ ಎಸಿಪಿ ದಿಗ್ವಿಜಯ್ ಸಿಂಗ್ ರಾಣಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಶುಕ್ರವಾರ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಕಾಲೇಜು ವಿದ್ಯಾರ್ಥಿಯೊಬ್ಬ ಮೈದಾನಕ್ಕೆ ಹಾರಿ ಪಿಚ್ ಕಡೆಗೆ ಓಡಲು ಆರಂಭಿಸಿದ. ಪಂದ್ಯದ ವೇಳೆ ವಿರಾಮವಿತ್ತು. ಆರೋಪಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಲು ಯೋಚಿಸಿದ್ದ. ಕಾನ್ಸ್‌ಟೇಬಲ್‌ಗಳು ಸ್ಥಳದಲ್ಲೇ ಆತನನ್ನು ಬಂಧಿಸಿದ್ದಾರೆ’ ಎಂದು ಎಸಿಪಿ ರಾಣಾ ತಿಳಿಸಿದ್ದಾರೆ.

‘ಪ್ರಾಥಮಿಕ ತನಿಖೆಯಲ್ಲಿ, ಆತನಿಗೆ ಬೇರೆ ಯಾವುದೇ ಉದ್ದೇಶಗಳಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಪಂದ್ಯದ ವೇಳೆ ಅತಿಕ್ರಮಣ ಮತ್ತು ಅಕ್ರಮ ಪ್ರವೇಶಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.

Comments (0)

Your email address will not be published. Required fields are marked *

Back to top button