Tuesday, January 27, 2026
26.9 C
Bengaluru
Google search engine
LIVE
ಮನೆ#Exclusive NewsTop Newsಹಾರ್ದಿಕ್‌ ಪಾಂಡ್ಯ ಮತ್ತು ಪತ್ನಿ ನತಾಶಾ ಬಾಂಧವ್ಯದಲ್ಲಿ ಉಂಟಾಯ್ತಾ ಬಿರುಕು?

ಹಾರ್ದಿಕ್‌ ಪಾಂಡ್ಯ ಮತ್ತು ಪತ್ನಿ ನತಾಶಾ ಬಾಂಧವ್ಯದಲ್ಲಿ ಉಂಟಾಯ್ತಾ ಬಿರುಕು?

ಬೆಂಗಳೂರು: ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯಗೆ 2024ರ ಸಾಲು ಹೇಳಿಕೊಳ್ಳುವಂತ್ತಿಲ್ಲ. ಗಾಯದ ಸಮಸ್ಯೆ ಕಾರಣ ಈ ವರ್ಷ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಸಾಕಷ್ಟು ಸಮಯ ದೂರ ಉಳಿದಿದ್ದ ಹಾರ್ದಿಕ್‌, 17ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿಯೊಂದಿಗೆ ಕ್ರಿಕೆಟ್‌ ಅಂಗಣಕ್ಕೆ ಮರಳಿದ್ದರು. ಆದರೆ, ಅವರ ಕಮ್‌ಬ್ಯಾಕ್‌ ಹೇಳಿಕೊಳ್ಳುವಂತ್ತಿರಲಿಲ್ಲ. ಮುಂಬೈ ಇಂಡಿಯನ್ಸ್ ಪ್ಲೇ ಆಫ್ಸ್‌ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡ ಬೆನ್ನಲ್ಲೇ ಹಾರ್ದಿಕ್‌ ವ್ಯಾಪಕ ಟೀಕೆಗಳನ್ನು ಎದುರಿಸಬೇಕಾಯಿತು. ಈ ನಡುವೆ ಕ್ರಿಕೆಟ್‌ ಬದುಕು ಮಾತ್ರವಲ್ಲ ಆಲ್‌ರೌಂಡರ್‌ನ ವೈವಾಹಿಕ ಜೀವನ ಕೂಡ ಹದಗೆಟ್ಟಿದೆ ಎಂಬುದು ಇತ್ತೀಚಿನ ವರದಿಗಳ ಮೂಲಕ ಬೆಳಕಿಗೆ ಬಂದಿದೆ.

ಮದುವೆಗೂ ಮೊದಲೇ ಗರ್ಭದರಿಸಿದ್ದ ಬಾಲಿವುಡ್‌ ಬೆಡಗಿ ನತಾಶಾ ಸ್ಟ್ಯಾನ್ಕೊವಿಚ್‌ ಅವರನ್ನು 2020ರಲ್ಲಿ ವಿವಾಹವಾದ ಹಾರ್ದಿಕ್‌ ಪಾಂಡ್ಯ ಅವರಿಗೆ ಈಗ ಮುದ್ದಾದ ಗಂಡು ಮಗ (ಅಗಸ್ತ್ಯ) ಇದ್ದಾನೆ. ಕೋವಿಡ್‌ 19 ಕಾರಣ 2020ರಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದ ಈ ಜೋಡಿ, ಬಳಿಕ 2023ರಲ್ಲಿ ಹಿಂದೂ ಮತ್ತು ಕ್ರಿಸ್ಚಿಯನ್‌ ಸಂಸ್ಕೃತಿಯಂತೆ ಮತ್ತೊಮ್ಮೆ ವಿವಾಹ ಮಹೋತ್ಸವ ನಡೆಸಿಕೊಂಡಿತ್ತು. ಇದೀಗ ಮದುವೆಯಾದ ಕೆಲವೇ ವರ್ಷಗಳಲ್ಲಿ ಈ ಜೋಡಿ ಬೇರೆಯಾಗಲಿದೆ ಎಂಬ ವದಂತಿ ಹರಡಿದ್ದು, ಇದಕ್ಕೆ ಪೂರಕ ಬೆಳವಣಿಗೆಗಳು ಕಂಡುಬಂದಿವೆ.

ಸೋಷಿಯಲ್ ಮೀಡಿಯಾಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟ್ಯಾನ್ಕೊವಿಚ್‌ ಸದಾ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, 2024ರಲ್ಲಿ ಈ ರೀತಿಯ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಅಷ್ಟೇ ಅಲ್ಲದೆ ಮಾರ್ಚ್‌ನಲ್ಲಿ (ಮಾ.4) ನತಾಶಾ ಅವರ ಹುಟ್ಟುಹಬ್ಬ ಇದ್ದರೂ ಕೂಡ ಪತಿ ಹಾರ್ದಿಕ್ ಪಾಂಡ್ಯ ಯಾವುದೇ ವಿಶೇಷ ಪೋಸ್ಟ್‌ ಹಂಚಿಕೊಂಡಿಲ್ಲ. ಸರ್ಬಿಯಾ ಮೂಲದವಾರದ ನತಾಶಾ ಸ್ಟ್ಯಾನ್ಕೊವಿಚ್‌ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದ ಪಾಂಡ್ಯ ಉಪನಾಮವನ್ನು ಕೂಡ ತೆಗೆದು ಹಾಕಿರುವ ಕಾರಣ ಈ ಜೋಡಿ ಈಗಾಗಗಲೇ ಬೇರ್ಪಟಿದೆ ಎಂದು ವರದಿಯಾಗಿದೆ.

“ಇದು ಕೇವಲ ಅಂದಾಜಷ್ಟೇ. ಆದರೆ, ಇಬ್ಬರೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ಫೋಟೋಗಳನ್ನು ಹಂಚಿಕೊಳ್ಳುತ್ತಿಲ್ಲ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲೂ ಈ ಜೋಡಿ ಜೊತೆಗಿರುವ ಯಾವುದೇ ಫೋಟೋ ಹಂಚಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲದೆ ನತಾಶಾ ತಮ್ಮ ಇನ್‌ಸ್ಟಾಗ್ರಾಮ್‌ ಬಯೋದಲ್ಲಿ ಪಾಂಡ್ಯ ಉಪನಾಮವನ್ನು ತೆಗದು ಹಾಕಿದ್ದಾರೆ. ಮೊದಲು ನತಾಶಾ ಸ್ಟ್ಯಾನ್ಕೊವಿಚ್‌ ಪಾಂಡ್ಯ ಎಂದಿತ್ತು. ಈಗ ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ,” ಎಂದು ರೆಡಿಟ್‌ ಪೋಸ್ಟ್‌ ಮಾಡಿದೆ.

ಈ ಪೋಸ್ಟ್‌ ಹೊರಬರುತ್ತಿದ್ದಂತೆಯೇ ನೆಟ್‌ ಲೋಕದಲ್ಲಿ ಫ್ಯಾನ್ಸ್‌ ಗುಸುಗುಸು ಶುರು ಮಾಡಿದ್ದಾರೆ. ಹಿಂದೆಲ್ಲಾ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿ ವೇಳೆ ಪ್ರತಿ ಪಂದ್ಯದಲ್ಲೂ ಕ್ರೀಡಾಂಗಣಕ್ಕೆ ಬಂದು ಪತಿಯನ್ನು ನತಾಶಾ ಹುರಿದುಂಬಿಸುತ್ತಿದ್ದರು. ಆದರೆ, ಐಪಿಎಲ್‌ 2024 ಟೂರ್ನಿಯಲ್ಲಿ ಒಂದು ಪಂದ್ಯದಲ್ಲೂ ನತಾಶಾ ಕಾಣಿಸಿಕೊಳ್ಳದೇ ಇರುವುದು, ವಿಚ್ಛೇದನದ ವದಂತಿಗೆ ತುಪ್ಪ ಸುರಿದಂತ್ತಾಗಿದೆ.

 

ಮುಂಬೈ ಇಂಡಿಯನ್ಸ್‌ ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡ ಹಾರ್ದಿಕ್‌ ಪಾಂಡ್ಯ ಸಾಲು ಸಾಲು ವೈಫಲ್ಯ ಕಂಡಿದ್ದಾರೆ. ಮಾಜಿ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಜೊತೆಗಿನ ಮುಸುಕಿನ ಗುದ್ದಾಟದ ಕಾರಣ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸೂಕ್ತ ಬೆಂಬಲ ಸಿಗಲಿಲ್ಲ. ಪರಿಣಾಮ ಐಪಿಎಲ್‌ 2024 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ 14ರಲ್ಲಿ 4 ಪಂದ್ಯಗಳನ್ನು ಮಾತ್ರವೇ ಗೆದ್ದು ಸ್ಪರ್ಧೆಯಿಂದ ಹೊರಬಿದ್ದಿತು. ಅಂಕಪಟ್ಟಿಯ ಕೊನೇ ಸ್ಥಾನ ಮುಂಬೈ ಪಾಲದ್ದರಿಂದ ಹಾರ್ದಿಕ್‌ ಕ್ಯಾಪ್ಟನ್ಸಿ ಬಗ್ಗೆಯೂ ಪ್ರಶ್ನೆ ಮೂಡಿದೆ.

ವೈಯಕ್ತಿಕ ಜೀವನದಲ್ಲಿ ಹಾರ್ದಿಕ್ ಪಾಂಡ್ಯ ಭಾರಿ ನಷ್ಟದಲ್ಲಿದ್ದಾರೆ. ಹಾರ್ದಿಕ್ ಮತ್ತು ಸಹೋದರ ಕೃಣಾಲ್‌ ಪಾಂಡ್ಯಗೆ ಸೋದರ ಸಮಬಂಧಿ ವೈಭವ್‌ ಪಾಂಡ್ಯಾ ಪಾಲಿಮರ್‌ ವಹಿವಾಟಿನಲ್ಲಿ ಹಣ ಹೂಡಿಕೆ ಮಾಡುವಂತೆ ಮಾಡಿ 4.3 ಕೋಟಿ ರೂ.ಗಳ ಭಾರಿ ಮೋಸ ಮಾಡಿದ್ದಾರೆ ಎಂಬುದು ವರದಿಯಾಗಿತ್ತು. ಒಟ್ಟಾರೆ ಸ್ಟಾರ್‌ ಆಲ್‌ರೌಂಡರ್‌ ಇಂದು ಎಲ್ಲಾ ವಿಚಾರಗಳಲ್ಲಿ ಭಾರ ಹಿನ್ನಡೆ ಅನುಭಿಸಿದ್ದು, 2024ರ ಸಾಲು ಅವರ ಪಾಲಿಗೆ ದುರದೃಷ್ಟ ತಂದಂತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments