Wednesday, April 30, 2025
35.6 C
Bengaluru
LIVE
ಮನೆಸಿನಿಮಾಖ್ಯಾತ ನಟಿ ಜೊತೆ ಹೆಚ್ಚಿತಾ ಆಪ್ತತೆ? ಯುವ ರಾಜ್​ಕುಮಾರ್​ ವಿಚ್ಛೇದನಕ್ಕೆ ಇದೇ ಕಾರಣ ಆಯ್ತಾ?

ಖ್ಯಾತ ನಟಿ ಜೊತೆ ಹೆಚ್ಚಿತಾ ಆಪ್ತತೆ? ಯುವ ರಾಜ್​ಕುಮಾರ್​ ವಿಚ್ಛೇದನಕ್ಕೆ ಇದೇ ಕಾರಣ ಆಯ್ತಾ?

ಬೆಂಗಳೂರು : ಡಾ. ರಾಜ್​ಕುಮಾರ್​ ಕುಟುಂಬದ ಅಭಿಮಾನಿಗಳಿಗೆ ಇದು ಶಾಕಿಂಗ್​ ನ್ಯೂಸ್​. ರಾಘವೇಂದ್ರ ರಾಜ್​ಕುಮಾರ್​ ಅವರ ಮಗ ಯುವ ರಾಜ್​ಕುಮಾರ್ ಸಂಸಾರದಲ್ಲಿ ಬಿರುಕು ಮೂಡಿದೆ. ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಬೇಕು ಎಂದು ಯುವ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಈ ದಂತಿಯ ನಡುವೆ ಮನಸ್ತಾಪ ಮೂಡಲು ಕಾರಣ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಯುವ ರಾಜ್​ಕುಮಾರ್​ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗಾಸಿಪ್​ ಪ್ರಕಾರ ಪ್ರಸಿದ್ಧ ನಟಿಯ ಜೊತೆ ಯುವ ರಾಜ್​ಕುಮಾರ್​ ಆಪ್ತತೆ ಹೆಚ್ಚಿಸಿಕೊಂಡಿದ್ದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.

2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಅವರ ಮದುವೆ ನಡೆದಿತ್ತು. ಇಬ್ಬರೂ ಪ್ರೀತಿಸಿ ವಿವಾಹ ಆಗಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಅವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಯಿತು. ಸಾರ್ವಜನಿಕವಾಗಿ ಈ ವಿಷಯ ಬಹಿರಂಗ ಆಗದೇ ಇದ್ದರೂ ಕೂಡ ಆಪ್ತ ವಲಯದಲ್ಲಿ ಗುಸುಗುಸು ಕೇಳಿಬರುತ್ತಿತ್ತು. ಕಡೆಗೂ ಸಂಸಾರದ ಬಿರುಕು ಬಹಿರಂಗ ಆಗಿದೆ.

ಮನಸ್ತಾಪ ಹೆಚ್ಚಿದ ಬಳಿಕ ಶ್ರೀದೇವಿ ಅವರು ವಿದೇಶಕ್ಕೆ ತೆರಳಿದರು. ಕಳೆದ ಕೆಲವು ತಿಂಗಳಿಂದ ಅವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಯುವ ರಾಜ್​ಕುಮಾರ್​ ನಟಿಸಿದ ‘ಯುವ’ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲೂ ಪತ್ನಿ ಶ್ರೀದೇವಿ ಕಾಣಿಸಿಕೊಳ್ಳಲೇ ಇಲ್ಲ. ಆಗಲೂ ಕೂಡ ಬಹುತೇಕರಿಗೆ ಅನುಮಾನ ಮೂಡಿತ್ತು.

ಮೂಲಗಳ ಪ್ರಕಾರ, ಯುವ ರಾಜ್​ಕುಮಾರ್​ ಅವರು ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಆ ನಟಿಯ ಜೊತೆ ಯುವ ಆಪ್ತತೆ ಹೆಚ್ಚಾಯಿತು. ಆ ಕಾರಣದಿಂದಲೇ ಅವರ ಸಂಸಾರದಲ್ಲಿ ಸಮಸ್ಯೆ ಶುರುವಾಗಿರುವ ಸಾಧ್ಯತೆ ದಟ್ಟವಾಗಿದೆ. ಸದ್ಯಕ್ಕೆ ಶ್ರೀದೇವಿ ಅವರು ವಿಚ್ಛೇದನದ ಕುರಿತಂತೆ ಪ್ರತಿಕ್ರಿಯೆ ನೀಡುವುದು ಬಾಕಿಯಿದೆ. ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಣ್ಣಾವ್ರ ಕುಟುಂಬದಲ್ಲಿ ಆಗುತ್ತಿರುವ ಮೊದಲ ವಿಚ್ಛೇದನ ಪ್ರಕರಣ ಇದು. ಹಾಗಾಗಿ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಕುಟುಂಬದ ಹಿರಿಯರಾದ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್, ಗೀತಾ ಶಿವರಾಜ್​ಕುಮಾರ್​​ ಮುಂತಾದವರು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments