ಬೆಂಗಳೂರು : ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಹಣ ಸಹಾಯ ಮಾಡಿದ ಆರೋಪದಡಿ ಪ್ರಜ್ವಲ್ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್ ನೀಡಿದೆ. ಸಹಾಯ ಮಾಡುವ ಜತೆಗೆ ಇಲ್ಲಿನ ವಿದ್ಯಾಮಾನಗಳನ್ನು ಗರ್ಲ್ ಫ್ರೆಂಡ್ ಅಪ್ ಡೇಟ್ ಮಾಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಗರ್ಲ್ ಫ್ರೆಂಡ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
ಹಲವು ಬಾರಿ ನೋಟಿಸ್ ನೀಡಿದ್ದರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬಂದಿರಲಿಲ್ಲ. ಆರ್ಥಿಕವಾಗಿ ಕಟ್ಟಿ ಹಾಕಲು ಅವರ ಬ್ಯಾಂಕ್ ಅಕೌಂಟ್‌ಗಳನ್ನು ಸೀಜ್ ಮಾಡಲು ಎಸ್ಐಟಿ ಮುಂದಾಗಿತ್ತು. ತನಿಖೆ ವೇಳೆ ಪ್ರಜ್ವಲ್‌ಗೆ ಹಣ ವರ್ಗಾವಣೆ ಮಾಡಿದ ಅಕೌಂಟ್‌ಗಳ ಮೇಲೆಯೂ ನಿಗಾ ಇಡಲಾಗಿತ್ತು. ಆದರೆ ಪ್ರಜ್ವಲ್‌ಗೆ ಗರ್ಲ್ ಫ್ರೆಂಡ್ ಹಣ ಸಹಾಯ ಮಾಡಿರುವುದು, ಆಶ್ರಯ ಕಲ್ಪಿಸಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ನೋಟಿಸ್ ನೀಡಲಾಗಿದೆ.