ಸಿನಿಮಾಸುದ್ದಿ

ಆರಾಧನಾಗೆ ಇದೀಗ ಬಿಗ್‌ ಬ್ಲ್ಯಾಕ್‌ ಜುಮ್ಕಾಗಳ ಮೇಲೆ ಲವ್‌…

ಬೆಂಗಳೂರು : ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ಆರಾಧನಾಗೆ ಇದೀಗ ಬಿಗ್‌ ಬ್ಲ್ಯಾಕ್‌ ಜುಮ್ಕಾಗಳ ಮೇಲೆ ಲವ್‌ ಆಗಿದೆ. ಹೌದು, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಆಗಿದ್ದ, ಮಾಲಾಶ್ರೀ ಮಗಳಾದ ನಟಿ ಆರಾಧನಾ, ಈಗಷ್ಟೇ ನಟ ದರ್ಶನ್‌ ಅವರೊಂದಿಗೆ ‘ಕಾಟೇರ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾನಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಡೆಲ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಒಂದಲ್ಲ ಒಂದು ಹೊಸ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಈ ಜನರೇಷನ್‌ ಹುಡುಗಿಯರನ್ನು ಸೆಳೆಯುತ್ತಿದ್ದಾರೆ.

ಅಂದಹಾಗೆ, ನಟಿ ಆರಾಧನಾ ಇದೀಗ ಬ್ಲ್ಯಾಕ್‌ ಔಟ್‌ಫಿಟ್‌ ಜೊತೆ ಬ್ಲ್ಯಾಕ್‌ ಬಿಗ್‌ ಜುಮ್ಕಾ ಧರಿಸಿ ಕಾಣಿಸಿಕೊಂಡಿರುವುದು ಅವರಿಗೆ ಬಾಲಿವುಡ್‌ ಫೀಲ್‌ ನೀಡಿದೆ. ಚಿತ್ರದೊಂದಿಗೆ ಅವರು ಹಾಕಿಕೊಂಡಿರುವ ಜುಮ್ಕಾ ಹಿಂದಿ ಹಾಡು ಅವರ ಜುಮ್ಕಾ ಮೇಲಿನ ಪ್ರೇಮವನ್ನು ಹೈಲೈಟ್‌ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಬ್ಲ್ಯಾಕ್‌ ಮೆಟಲ್‌ನ ಬಿಗ್‌ ಜುಮ್ಕಾಗಳು ಎಲ್ಲಾ ಬ್ಲ್ಯಾಕ್‌ ಹಾಗೂ ಡಾರ್ಕ್‌ ಶೇಡ್‌ಗೆ ಮ್ಯಾಚ್‌ ಆಗುತ್ತವೆ. ಹೆಚ್ಚು ಮಿಕ್ಸ್‌ ಮ್ಯಾಚ್‌ ಮಾಡುವ ಅಗತ್ಯವಿಲ್ಲ ಎನ್ನುವ ಜ್ಯುವೆಲ್‌ ಡಿಸೈನರ್‌ಗಳು, ಆರಾಧನಾ ಅವರಿಗೆ ಈ ಜುಮ್ಕಾಗಳು ಸಖತ್‌ ಆಗಿ ಮ್ಯಾಚ್‌ ಆಗಿವೆ. ಅವರ ವೆಸ್ಟರ್ನ್‌ ಸ್ಟೈಲ್‌ಗೆ ಸಾಥ್‌ ನೀಡಿವೆ. ಜುಮ್ಕಾಗಳು ವೆಸ್ಟರ್ನ್‌ ಸ್ಟೈಲ್‌ಸ್ಟೇಟ್ಮೆಂಟ್‌ಗೆ ಮ್ಯಾಚ್‌ ಮಾಡಿರುವುದು ಅವರಿಗೆ ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿವೆ ಎನ್ನುತ್ತಾರೆ ಅವರು.


ಇನ್ನು ಅವರ ಬಾರ್ಡಟ್‌ ಡ್ರೆಸ್‌ ಇವನ್ನು ಮತ್ತಷ್ಟು ಹೈಲೈಟ್‌ ಮಾಡಿದೆ. ಇದರೊಂದಿಗೆ ಮ್ಯಾಚ್‌ ಮಾಡಿರುವ ಬಿಗ್‌ ಬ್ಲ್ಯಾಕ್‌ ಮೆಟಲ್‌ನ ಕಾಕ್ಟೈಲ್‌ ಫಿಂಗರ್‌ರಿಂಗ್‌ ಕೂಡ ಕಂಪ್ಲೀಟ್‌ ಮಾರ್ಡನ್‌ ಟಚ್‌ ನೀಡಿದೆ. ಇನ್ನು, ಅವರ ಹನ್‌ ಹೇರ್‌ಸ್ಟೈಲ್‌ ಹಾಗೂ ನೆಕ್‌ಲೇಸ್‌ ಇಲ್ಲದ ಖಾಲಿ ಕತ್ತನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಇವೆಲ್ಲದರ ಜೊತೆಗೆ ತಿಳಿಯಾದ ಮೇಕಪ್‌, ಕಾಜಲ್‌ ಹಚ್ಚಿದ ಕಂಗಳು ಸಿಂಪಲ್‌ ಲುಕ್‌ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗುವಂತಿದೆ ಎನ್ನುವ ಫ್ಯಾಷನ್‌ ವಿಮರ್ಶಕರಾದ ರಿಚಾ ಪ್ರಕಾರ, ಇದು ಯಂಗ್‌ ಹುಡುಗಿಯರ ಸ್ಟೈಲಿಶ್‌ ಲುಕ್‌ಗೆ ಮಾದರಿಯಾಗುವಂತಿದೆ ಎನ್ನುತ್ತಾರೆ.

ಬಿಗ್‌ ಜುಮ್ಕಾಗಳು ಅದರಲ್ಲೂ, ಬ್ಲ್ಯಾಕ್‌ ಹಾಗೂ ವೈಟ್‌ ಮೆಟಲ್‌ನ ಜುಮ್ಕಾಗಳು ಸದಾ ಸಿನಿ ತಾರೆಯರ ಫೇವರೇಟ್‌ ಲಿಸ್ಟ್‌ನಲ್ಲಿವೆ. ಸಿನಿಮಾಗಳಲ್ಲಿ ಅಥವಾ ಸೀರಿಯಲ್‌ಗಳಲ್ಲಿ ಸೀರೆಯೊಂದಿಗೆ ಅಥವಾ ಎಥ್ನಿಕ್‌ ಉಡುಪುಗಳೊಂದಿಗೆ ನಾಯಕಿಯರು ಧರಿಸುವ ಈ ಬಿಗ್‌ ಜುಮ್ಕಾಗಳು, ಹುಡುಗಿಯರನ್ನು ಮಾತ್ರವಲ್ಲ, ಮಧ್ಯ ವಯಸ್ಕ ಮಹಿಳೆಯರನ್ನು ಸೆಳೆದು ಟ್ರೆಂಡಿಯಾಗಿವೆ. ಬಾಲಿವುಡ್‌ನ ನಟಿ ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್‌, ಸೋನಂ ಕಪೂರ್‌, ಜಾನ್ಹವಿ ಸೇರಿದಂತೆ ಸಾಕಷ್ಟು ಬಾಲಿವುಡ್‌ ನಟಿಯರನ್ನು ಸವಾರಿ ಮಾಡಿವೆ. ಬರಬರುತ್ತಾ ಸ್ಯಾಂಡಲ್‌ವುಡ್‌ ನಟಿಯರನ್ನು ಸೆಳೆದಿವೆ. ಇವೆಲ್ಲದರ ಪರಿಣಾಮ, ಎವರ್‌ಗ್ರೀನ್‌ ಮೆಟಲ್‌ ಜ್ಯುವೆಲ್‌ ಟ್ರೆಂಡ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Comments (0)

Your email address will not be published. Required fields are marked *

Back to top button