ಅಯೋಧ್ಯೆ : ಅಯೋಧ್ಯೆಯಲ್ಲಿ ಬಾಲ ರಾಮ ಮಂದಿರ ಸ್ಥಾಪನೆಗೊಂಡಿದ್ದೇ ತಡ ಯಾರು ಯಾರಿಗೆ ಎಷ್ಟೆಲ್ಲಾ ಭಾಗ್ಯದ ಬಾಗಿಲು ತೆರೆದಿದೆ ಎಂಬುದು ಊಹಿಸಿಕೊಳ್ಳೋಕು ಆಗ್ತಿಲ್ಲ, ಗಳಿಕೆ ಎಂಬುದು ಲೆಕ್ಕಕ್ಕೂ ಸಿಗ್ತಿಲ್ಲ. ಇನ್ನು ರಾಜಕೀಯ ಮೇಲಾಟದಲ್ಲಿ ಲಾಭ-ನಷ್ಟದ ಬಾಬ್ತು ಎಷ್ಟು ಎಂಬುದು ಪ್ರಚಲಿತ ಲೋಕಸಭಾ ಚುನಾವಣೆ ಫಲಿತಾಂಶಗಳನ್ನು ನೋಡಿ ಜೂನ್ ಮೊದಲ ವಾರದಲ್ಲಿ ಹೇಳಬಹುದು! ಇದರಾಚೆಗೆ ನೋಡುವುದಾದರೆ ಈಗಂತೂ ಬಿಡಿ ಇದು ಸಾಮಾಜಿಕ ಜಾಲತಾಣಗಳ ಯುಗ. ಇಲ್ಲಿ ಜನಪ್ರಿಯವಾಗುವುದು ದೊಡ್ಡ ವಿಷಯವಲ್ಲ. ನಿಮ್ಮಲ್ಲಿ ನಿಜಕ್ಕೂ ಒಂದಷ್ಟು ವಿಶೇಷ ಕಲೆ ಅಥವಾ ಕೆಲವು ವಿಚಿತ್ರ ಗುಣಗಳು ಇದ್ದು ಅದನ್ನು ಪ್ರದರ್ಶನಕ್ಕೆ ಇಟ್ಟರೆ ದಿನಬೆಳಗಾಗೋದರೊಳಗೆ ಜನಪ್ರಿಯತೆಯ ಶಿಖರವನ್ನೇರಿರುತ್ತೀರಿ. ಅದಕ್ಕೆ ತಕ್ಕಂತೆ ಲಾಭ/ ಪ್ರಯೋಜನಗಳನ್ನು ಹೋಂದಿರುತ್ತೀರಿ. ಒಟ್ಟು ಜನರನ್ನು ಆಕರ್ಷಿಸಬೇಕು ಅಷ್ಟೇ – ಇಲ್ಲಿನ ನಿಯಮ. ಅದನ್ನು ಅಂತರ್ಜಾಲದಲ್ಲಿ ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಾರೆ. ಮತ್ತು ಆ ವೀಡಿಯೊಗಳು ನಿಮ್ಮನ್ನು ರಾತ್ರೋರಾತ್ರಿ ಹೀರೋ ಮಾಡಿಬಿಡುತ್ತವೆ. ದೆಹಲಿಯ ವೈರಲ್ ವಡಾ ಪಾವ್ ಹುಡುಗಿಯಿಂದ ನಾಗ್ಪುರದ ಡಾಲಿ ಛಾಯ್ವಾಲಾವರೆಗೆ, ಅನೇಕ ಸಾಮಾಜಿಕ ಮಾಧ್ಯಮದ ಜನಪ್ರಿಯ ತಾರೆಯರ ವೀಡಿಯೊಗಳನ್ನು ಇಂಟರ್ನೆಟ್‌ನಲ್ಲಿ ನೋಡಬಹುದು. ಸದ್ಯ ಅಂತಹ ಒಂದು ವಿಡಿಯೋ ನೆಟ್‌ನಲ್ಲಿ ಹರಿದಾಡುತ್ತಿದೆ. ಅದು ಅಯೋಧ್ಯೆಯ ಗೋಲು ಎಂಬ ಬಾಲಕನ ಕುರಿತದ್ದಾಗಿದೆ. ಈ ವಿಡಿಯೋ ನೆಟಿಜನ್‌ಗಳ ಗಮನ ಸೆಳೆದಿದೆ. ಬಾಲ ಗೋಲು ತನ್ನ ಉತ್ತರದಿಂದ ಅಪಾರ ಜನರ ಮನ ಗೆದ್ದಿದ್ದಾನೆ.
ಏಪ್ರಿಲ್ 29 ರಂದು Insta ಹ್ಯಾಂಡಲ್ @guardians_of_the_cryptoverse ನೊಂದಿಗೆ ಹಂಚಿಕೊಳ್ಳಲಾದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದುವರೆಗೆ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಸಾವಿರಾರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕಷ್ಟಪಟ್ಟು ದುಡಿಯುವ ಗೋಲುಗೆ ಸೆಲ್ಯೂಟ್ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದರೆ, ಇನ್ನು ಕೆಲವರು ಹಾಗಾದರೆ ಇನ್ನು ಮುಂದೆ ದೇವಸ್ಥಾನ, ಫುಟ್ಪಾತ್ಗಳಲ್ಲಿ ಎಲ್ಲರೂ ತಿಲಕ ಪೆಟ್ಟಿಗೆ ಹಿಡಿದು ಕೆಲಸ ಆರಂಭಿಸಬೇಕಾ? ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.