Wednesday, January 28, 2026
23.8 C
Bengaluru
Google search engine
LIVE
ಮನೆಸಿನಿಮಾಕಾಜೋಲ್ ಜೊತೆ 27 ವರ್ಷಗಳ ನಂತರ ನಟಿಸಿದ್ದಾರೆ ಪ್ರಭುದೇವ್

ಕಾಜೋಲ್ ಜೊತೆ 27 ವರ್ಷಗಳ ನಂತರ ನಟಿಸಿದ್ದಾರೆ ಪ್ರಭುದೇವ್

ಬೆಂಗಳೂರು : ನಟ, ನಿರ್ದೇಶಕ ಪ್ರಭುದೇವ್  ಮತ್ತು ಬಾಲಿವುಡ್ ನಟಿ ಕಾಜೋಲ್‍ ಬರೋಬ್ಬರಿ 27 ವರ್ಷಗಳ ನಂತರ ಜೊತೆಯಾಗಿ ನಟಿಸಿದ್ದಾರೆ. ಎರಡುವರೆ ದಶಕಗಳ ಹಿಂದೆ ತೆರೆಕಂಡ ‘ಮಿನ್ಸರ್ ಕನವು’ ಸಿನಿಮಾದಲ್ಲಿ ಈ ಜೋಡಿ ಒಂದಾಗಿ ನಟಿಸಿತ್ತು. ಆನಂತರ ಜೊತೆಯಾಗಿ ಕಾಣಿಸಿಕೊಳ್ಳುವಂಥ ಅವಕಾಶವೇ ಸಿಕ್ಕಿರಲಿಲ್ಲ.

ಮಿನ್ಸರ್ ಕನವು ಸಿನಿಮಾದಲ್ಲಿ ಪ್ರೇಮಿಗಳಾಗಿ ಈ ಜೋಡಿ ಕಾಣಿಸಿಕೊಂಡಿತ್ತು. ಅದರಲ್ಲೂ ಈ ಸಿನಿಮಾದ ವೆನ್ನಿಲ್ಲವೇ ವಿನ್ನಿಲ್ಲವೇ ಸೂಪರ್ ಹಿಟ್ ಗೀತೆ. ರೆಹಮಾನ್ ಸಂಗೀತ ಸಂಯೋಜನೆಯ ಈ ಹಾಡು ಪ್ರೇಮಿಗಳ ಮನಸ್ಸು ಕದ್ದಿತ್ತು. ಈ ಬಾರಿ ಕಾಜೋಲ್ ಮತ್ತು ಪ್ರಭುದೇವ್ ಡ್ಯುಯೆಟ್ ಹಾಡುತ್ತಿಲ್ಲ. ಥ್ರಿಲ್ಲರ್ ಸಿನಿಮಾಗಾಗಿ ಒಂದಾಗಿದ್ದಾರೆ.
ತೆಲುಗಿನ ನಿರ್ದೇಶಕ ಚರಣ್ ತೇಜ್ ಉಪ್ಪಲಪಟ್ಟಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ. ಹಿಂದಿಯಲ್ಲಿ ಅವರು ಮಹಾರಾಗ್ನಿ  ಹೆಸರಿನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲೇ ಪ್ರಭುದೇವ್ ಮತ್ತು ಕಾಜೋಲ್ ಜೊತೆಯಾಗಿ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ.
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments