Wednesday, April 30, 2025
35.6 C
Bengaluru
LIVE
ಮನೆರಾಜ್ಯಚುನಾವಣೆ ತಪಾಸಣಾ ಅಧಿಕಾರಿಗಳಿಂದ 38.5 ಲಕ್ಷದ ಆಭರಣ ಸೀಜ್!

ಚುನಾವಣೆ ತಪಾಸಣಾ ಅಧಿಕಾರಿಗಳಿಂದ 38.5 ಲಕ್ಷದ ಆಭರಣ ಸೀಜ್!

ಧಾರವಾಡ : ತೇಗೂರು ಚೆಕ್ ಪೋಸ್ಟ್ ಬಳಿ 38ವರೇ ಲಕ್ಷ ಆಭರಣ ಸೀಜ್.ಚುನಾವಣೆ ತಪಾಸಾಣಾ ಅಧಿಕಾರಿಗಳಿಂದ ಆಭರಣ ವಶಕ್ಕೆ. ಸರಿಯಾದ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗಲಾಗುತ್ತಿದ್ದ ಸುಮಾರು 38ವರೇ ಲಕ್ಷದ ಬಂಗಾರದ ಆಭರಣವನ್ನು ವಶಕ್ಕೆ ಪಡೆಯುವಲ್ಲಿ ಕಳೆದ ದಿನ ರಾತ್ರಿ ಧಾರವಾಡ ತೇಗೂರ ಚೆಕ್ ಪೋಸ್ಟ್‌ನ ಚುನಾವಣಾ ತಪಸಾಣಾ ಅಧಿಕಾರಿಗಳು‌ ಯಶಸ್ವಿಯಾಗಿದ್ದಾರೆ.

ಕೆ.ಎಸ್.ಆರ್.ಟಿ.ಸಿಯ ನಿಪ್ಪಾಣಿ –ಗಂಗಾವತಿ ಬಸ್‍‌ನಲ್ಲಿ ಸರಿಯಾದ ದಾಖಲೆ ಇಲ್ಲದ ರೂ. 38,50,000 ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿದ್ದು, ವಸ್ತು ವಶ ಪಡಿಸಿಕೊಂಡು ಎಫ್‍ಐಆರ್ ದಾಖಲಿಸಲಾಗಿದೆ. ತೆಗೂರ ಚೆಕ್ ಪೋಸ್ಟ್‍ದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-37-ಎಫ್-0748 ಆರೋಪಿ ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ (47) ಹುಕುಮಜಿ ಮಾಲಿ ಇವರು ಒಟ್ಟು 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೇಟ ಇರುವ ಬಂಗಾರದ ಆಭರಣಗಳು ತೆಗೆದುಕೊಂಡು ಕೊಲ್ಲಾಪುರದಿಂದ ಸಿಂದನೂರ ಕಡೆಗೆ ಹೋಗುತ್ತಿದ್ದರು.

ಸದರಿಯವರು ತೋರಿಸಿದ ಬಿಲ್‍ಗಳಲ್ಲಿ ಇರುವ ಬಂಗಾರದ ಆಭರಣಗಳ ತೂಕಕ್ಕೂ ಹಾಗೂ ತಪಾಸಣೆಯಲ್ಲಿ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಇದ್ದು, ಸರಿಯಾದ ಮಾಹಿತಿಯನ್ನು ಬಿಲ್ಲುಗಳಲ್ಲಿ ನಮೂದಿಸದೇ ಮರೆಮಾಚಿ ಯಾವುದೋ ಅಪರಾಧ ಕೃತ್ಯ ಎಸಗುವ ಸಲುವಾಗಿ ತೆಗೆದುಕೊಂಡು ಹೊರಟಿರುವ ಸಂಶಯ ಬಲವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಆಭರಣವನ್ನು ವಶಕ್ಕೆ ಪಡೆದು, ಮುಂದಿನ ಕ್ರಮ ಜರುಗಿಸಲಾಗಿದೆ.‌ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments