ಚಿಕ್ಕೋಡಿ : ಸತೀಶ್ ಜಾರಕಿಹೋಳಿ ಪುತ್ರಿ ಪ್ರಿಯಾಂಕ ಜಾರಕಿಹೋಳಿಗೆ ಚಿಕ್ಕೋಡಿ ಲೋಕಸಭೆ ಟಿಕೇಟ್ ಹಿನ್ನಲೆಯಲ್ಲಿ ಜಾರಕಿಹೋಳಿ ಕುಟುಂಬದ ವಿರುದ್ದ ಶಂಭು ಕಲ್ಲೋಳಿಕರ ರೆಬಲ್ ಆಗಿದ್ದಾರೆ. ಶಂಭು ಕಲ್ಲೋಳಿಕರ ಮಾಜಿ IAS ಅಧಿಕಾರಿ ರಾಯಬಾಗ ಕ್ಷೇತ್ರದ ಪರಾಜಿಜಿತ ಅಭ್ಯರ್ಥಿಯಾಗಿದ್ದಾರೆ.
ಪ್ರಚಾರಕ್ಕೆ ಮುನ್ನವೇ ಚಿಕ್ಕೋಡಿಯಲ್ಲಿ ಜಾರಕಿಹೋಳಿಗೆ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಜಾರಕಿಹೋಳಿ ಸೋಲಿಸಲು ರಣತಂತ್ರ ರೂಪಿಸಲು ಸತೀಶ್ ವಿರೋಧಿ ಬನ ಮುಂದಾಗಿದ್ದಾರೆ. ಶುಂಭುಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಂಭು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸಹೋದರ ಮಾವ ಕೂಡ ಆಗಿದ್ದಾರೆ.
ಕಲ್ಲೋಳಿಕರ ಹಾಗೂ ಕಾರ್ಯಕರ್ತರು ಜಾರಕಿಹೋಳಿ ಕುಟುಂಬದ ವಿರುದ್ಧ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಕಾರ್ಯಕರ್ತರನ್ನ ಕಡೆಗಣಿಸಿ ಜಾರಕಿಹೋಳಿ ಕುಟುಂಬ ಬೆಳೆಯಲು ಟಿಕೇಟ್ ನೀಡಲಾಗಿದೆ ಎಂದು ಹೇಳಲಾಯಿತು. ಅರ್ಹತೆ ಇಲ್ಲದ ಅಭ್ಯರ್ಥಿಗಳನ್ನ ಕಾಂಗ್ರೆಸ್ ಪಕ್ಷ ಚುನಾವಣೆಗೆ ನಿಲ್ಲಿಸಿದೆ. ಕುಟುಂಬ ರಾಜಕೀಯದ ವಿರುದ್ದ ಹೊರಾಡಲು ಬೆಂಬಲಿಗರ ಸಭೆ ಎಂದು ಶಂಭು ಕಲ್ಲೋಳಿಕರ ಹೇಳಿದ್ದಾರೆ.
ಹಣ ಬಲ, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಪುತ್ರಿಗೆ ಟಿಕೇಟ್ ನೀಡಿದ್ದಾರೆ ಎಂದು ಶಂಬು ಕಿಡಿ ಕಾರಿದ್ದಾರೆ. ಮತ್ತೊಮ್ಮೆ ಕಾರ್ಯಕರ್ತರ ಸಭೆ ನಡೆಸಿ ಯಾರ ಪರ ನಿಲ್ಲಬೇಕು ಎಂದು ತೀರ್ಮಾನ ಮಾಡುವುದಾಗಿ ಕಲ್ಲೋಳಿಕರ ಹೇಳಿಕೆಯನ್ನ ನೀಡಿದ್ದಾರೆ.