ಚಿಕ್ಕೋಡಿ : ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ ಅಗರವಾಲ್ ವಿಶ್ವಾಸ ವ್ಯಕ್ತ ಪಡಿಸಿದರು.
ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಹಣ ಬಲದಿಂದ ಕಳೆದ ಬಾರಿ ಸೋತಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನ ಈ ಬಾರಿ ಗೆಲ್ಲಲಿದ್ದೇವೆ ಹಣ ಬಲದ ಮಧ್ಯೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನ ಈ ಬಾರಿ ಗೆಲ್ಲಲಿದ್ದೇವೆ ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಈ ಬಾರಿಯೂ ಐತಿಹಾಸಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಚಿಕ್ಕೋಡಿಯಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಿಕ್ಕೋಡಿಯಲ್ಲಿ ಯಾವುದೇ ಹೊಂದಾಣಿಕೆ ರಾಜಕಾರಣ ನಡೆಯುತ್ತಿಲ್ಲ ಕರ್ನಾಟಕ ರಾಜ್ಯದಲ್ಲಿ ಮೋದಿಗೆ ಜನ ಮನ್ನಣೆ ಕೊಡುವುದು ನಿಶ್ಚಿತ ಕಾಂಗ್ರೆಸ್ ಪಕ್ಷ ಹಣ ಬಲದಿಂದ ಲೋಕಸಭಾ ಚುನಾವಣೆ ಎದುರಿಸುತ್ತಿದೆ ಎಷ್ಟೇ ಹಣ ಬಲ ಪ್ರಯೋಗಿಸಿದರೂ ಕರ್ನಾಟಕದಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲಿದೆ ಕರ್ನಾಟಕದಲ್ಲಿ ಜನರಿಗೆ ಭಿಕ್ಷೆ ರೂಪದಲ್ಲಿ ಗ್ಯಾರಂಟಿ ಯೋಜನೆ ನೀಡಲಾಗುತ್ತಿದೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನಪ್ಪಿದ ನಂತರ ಗ್ಯಾರಂಟಿ ಯೋಜನೆ ಸ್ಥಗಿತಗೊಳ್ಳಲಿವೆ ಎಂದರು.
ಚಿಕ್ಕೋಡಿಯಲ್ಲಿ ರಮೇಶ ಜಾರಕಿಹೊಳಿ ಪ್ರಚಾರಕ್ಕೆ ಗೈರು ವಿಚಾರ
ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬೆಳಗಾವಿಯಲ್ಲಿ ಶೆಟ್ಟರ ಗೆಲ್ಲಿಸಲು ಜವಾಬ್ದಾರಿ ನೀಡಲಾಗಿದೆ ಬೆಳಗಾವಿ ಚಿಕ್ಕೋಡಿ ಅಷ್ಟೇ ಅಲ್ಲದೇ ದೇಶದಾದ್ಯಂತ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದೆ. ಕರ್ನಾಟಕದ ಯಾವುದೇ ಸಚಿವರು ಭಯದಿಂದ ಚುನಾವಣೆ ಎದುರಿಸಲು ಸಿದ್ದರಾಗಿರಲಿಲ್ಲ ಹೀಗಾಗಿ ಕಾಂಗ್ರೆಸ್ ಅವರ ವಂಶದ ಕುಡಿಗಳಿಗೆ ಟಿಕೆಟ್ ಕೊಡಿಸಿದ್ದಾರೆ.