ಕ್ರಿಕೆಟ್ವೈರಲ್ ನ್ಯೂಸ್ಸುದ್ದಿ

ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್​ಸಿಬಿ ನಾಯಕ ಡುಪ್ಲೆಸಿಸ್​ಗೆ ಭಾರೀ ಅವಮಾನ

ಚೆನ್ನೈ: ಬಹುನಿರೀಕ್ಷಿತ ಐಪಿಎಲ್ 2024 ಟೂರ್ನಿಗೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಚೊಚ್ಚಲ ಪಂದ್ಯದಲ್ಲಿ ಗೆಲ್ಲುವ ನಿರೀಕ್ಷೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಚೆನ್ನೈಗೆ ತಲುಪಿದ್ದು, ಅಭ್ಯಾಸ ನಡೆಸುತ್ತಿದೆ.

ಇದರ ನಡುವೆ ಬುಧವಾರ ಚೆನ್ನೈನಲ್ಲಿ ಆರ್ ಸಿಬಿಯ ಹಸಿರುವ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಭಾಗವಹಿಸಿದ್ದರು. ಈ ಸಂದರ್ಭ ವಿಶೇಷ ಘಟನೆ ನಡೆದಿದೆ. ಹಸಿರು ಜೆರ್ಸಿ ಬಿಡುಗಡೆ ಸಮಾರಂಭದ ವೇಳೆ ಆರ್‌ಸಿಬಿ ನಾಯಕ ಫಾಫ್ ಡುಸಪ್ಲೆಸಿಸ್ ಬಳಿ ಪಾರ್ಟಿ ಕ್ರ್ಯಾಕರ್ ಸಿಡಿಸಲಾಗಿದೆ.

ಇದರ ಶಬ್ದಕ್ಕೆ ಆಶ್ಚರ್ಯಗೊಂಡ ಫಾಫ್ ಮುಖ ತಿರುಗಿಸಿ ಒಂದು ಕ್ಷಣ ಆಘಾತಗೊಂಡರು. ಇದನ್ನು ಕಂಡ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದರಿಂದ ಫಾಫ್ ಗೆ ಅವಮಾನವಾಯಿತು. ಬಳಿಕ ಫಾಫ್ ಕೂಡ ನಗುತ್ತಾ ನನಗೆ ಪಾರ್ಟಿ ಕ್ರ್ಯಾಕರ್ ಸಿಡಿಸಿದ್ದು ಆಶ್ಚರ್ಯವಾಯಿತು ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

Comments (0)

Your email address will not be published. Required fields are marked *

Back to top button