ಸುದ್ದಿ

ಚಂದ್ರಯಾನ 3 ಲ್ಯಾಂಡಿಂಗ್​ಗೆ ಅಧಿಕೃತ ಹೆಸರು

ಚಂದ್ರಯಾನ 3 ಲ್ಯಾಂಡಿಂಗ್‌ ಸೈಟ್‌ಗೆ Statio Shiva Shakti ಹೆಸರು ಅಧಿಕೃತಗೊಳಿಸಿದ ಖಗೋಳ ಒಕ್ಕೂಟ !
2023ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ನೌಕೆಯ ವಿಕ್ರಮ ಲ್ಯಾಂಡರ್‌ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ಕರೆಯಲಾಗುವುದು ಎಂದು ಘೋಷಣೆ ಮಾಡಿದ್ದರು. ಇಡೀ ವಿಶ್ವವೇ ಅಚ್ಚರಿಪಡುವಂತೆ ಚಂದ್ರಯಾನ-3 ಯೋಜನೆಯ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಕ್ರಮ್‌ ಲ್ಯಾಂಡರ್‌ಅನ್ನು ಅತ್ಯಂತ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡಿತ್ತು.

ಈ ಸ್ಥಳವನ್ನು ಪ್ರಧಾನಿ ನರೇಂದ್ರ ಮೋದಿ ಶಿವಶಕ್ತಿ ಪಾಯಿಂಟ್‌ ಎಂದು ಕರೆಯಲಾಗುವುದು ಎಂದು ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ( ಐಎಯು ) ಈ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್‌ ಎನ್ನುವ ಹೆಸರನ್ನು ಅಧಿಕೃತಗೊಳಿಸಿದೆ. ಇದರಿಂದಾಗಿ ಇನ್ನು ಮುಂದೆ ಈ ಸ್ಥಳ ಐಎಯು ಹಾಗೂ ಇತರ ವೈಜ್ಞಾನಿಕ ದಾಖಲೆಗಳಲ್ಲಿ Statio Shiva Shakti ಎನ್ನುವ ಹೆಸರಿನಿಂದ ಗುರುತಿಸಿಕೊಳ್ಳಲಿದೆ.

ಮಾರ್ಚ್‌ 19 ರಂದು ಪ್ಯಾರಿಸ್‌ ಮೂಲದ ಐಎಯು ಚಂದ್ರಯಾನ-3 ಚಂದ್ರನ ಮೇಲೆ ಲ್ಯಾಂಡ್‌ ಆದ ಸ್ಥಳಕ್ಕೆ ಸ್ಟೇಟಿಯೋ ಶಿವ ಶಕ್ತಿ ಎನ್ನುವ ಹೆಸರಿಗೆ ಒಪ್ಪಿಗೆ ನೀಡಿದೆ. ಖಗೋಳ ಸಂಸ್ಥೆಯಿಂದ ಅನುಮೋದಿಸಲಾದ ಗ್ರಹಗಳ ಹೆಸರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವ ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮೆನ್‌ಕ್ಲೇಚರ್‌ನಲ್ಲಿ ಇದರ ವರದಿ ಪ್ರಕಟವಾಗಿದೆ. ಹೆಸರಿನ ಮೂಲದ ಬಗ್ಗೆ ಗೆಜೆಟಿಯರ್‌ನಲ್ಲಿ ವಿವರಣೆ ನೀಡಲಾಗಿದೆ. “ಭಾರತೀಯ ಪುರಾಣದ ಸಂಯುಕ್ತ ಪದವು ಪುಲ್ಲಿಂಗ (‘ಶಿವ’) ಮತ್ತು ಸ್ತ್ರೀಲಿಂಗ (‘ಶಕ್ತಿ’) ಪ್ರಕೃತಿಯ ಎರಡು ಅಂಶಗನ್ನು ಚಿತ್ರಿಸುತ್ತದೆ; ಇದೇ ಹೆಸರನ್ನು ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್‌ನ ಲ್ಯಾಂಡಿಂಗ್ ಸೈಟ್‌ಗೆ ಇಡಲಾಗಿದೆ’ ಎಂದು ಮಾಹಿತಿ ನೀಡಿದೆ.

Comments (0)

Your email address will not be published. Required fields are marked *

Back to top button