ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಪ್ರಚಾರ ಶುರು ಮಾಡಿದ್ದಾರೆ. ಕೊಳ್ಳೆಗಾಲದಲ್ಲಿ ರೋಡ್ ಶೋ ಮೂಲಕ ವಿಜಯೇಂದ್ರ ಮತಯಾಚಿಸಲಿದ್ದಾರೆ. ಈ ಸಂದರ್ಭದಲ್ಲಿ ಕೊಳ್ಳೆಗಾಲದಲ್ಲಿ ಬಿ ವೈ ವಿಜಯೇಂದ್ರ ಮಾತನಾಡಿಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆ. ಈ ಚುನಾವಣೆ ಈಡೀ ವಿಶ್ವದ ಗಮನ ಸೆಳೆದಿರುವ ಚುನಾವಣೆಯಾಗಿದೆ. ಇಡೀ ದೇಶದಲ್ಲಿ ಮೋದಿ ಮತ್ತೊಮ್ಮೆ ಎನ್ನುವ ಕೂಗು ಕೇಳುತ್ತಿದೆ.
ಪ್ರಧಾನಿ ಮೋದಿಯವರ ಆಡಳಿತ ವೈಖರಿ ಆಡಳಿತ ವಿರೋಧಿ ಅಲೆಯಿಲ್ಲ. ಮೋದಿಯವರು ನುಡಿದಂತೆ ನಡೆದ ಪ್ರಧಾನಮಂತ್ರಿಯಾಗಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಅಗಿರುವ ಅಭಿವೃದ್ಧಿ ಕಾರ್ಯಗಳು ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎನ್ನುವ ಸಂಕಲ್ಪವಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ್ರು ಮೋದಿಯವರನ್ನ ಮೆಚ್ಚಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಪಕ್ಷದಿಂದ ನಾವು ಮೋದಿಯವರನ್ನ ಬೆಂಬಲಿಸ್ತೀವಿ. ಇದರಲ್ಲಿ ಯಾವುದೇ ಈ ರೀತಿಯ ಸ್ವಾರ್ಥವಿಲ್ಲ. ರಾಜ್ಯದಲ್ಲಿರುವಂತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದಿದೆ. ಅಧಿಕಾರದ ಅಮಲಿನಲ್ಲಿದ್ದ ಮುಖ್ಯಮಂತ್ರಿಗೆ ವಾಸ್ತವ ಗೊತ್ತಾಗ್ತಿದೆ ಎಂದರು.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರಧಾನಿಗಳು 6 ಸಾವಿರ ಕೊಡ್ತಿದ್ರು, ಯಡಿಯೂರಪ್ಪ ನವರು 4 ಸಾವಿರ ಕೊಡ್ತಿದ್ರು, ಬಸವರಾಜ್ ಬೊಮ್ಮಾಯಿಯವರ ವಿದ್ಯಾಸಿರಿ ಯೋಜನೆ ನಿಲ್ಲಿಸಿದ್ರೂ, ಹಾಲಿನ ಬೆಲೆ ಏರಿಕೆಯಾಗಿದೆ ಅದ್ರೆ ಹೈನುಗಾರಿಕೆ ಪ್ರೋತ್ಸಾಹ ಧನವನ್ನ ತಡೆ ಹಿಡಿದಿದ್ದಾರೆ. ಯಡಿಯೂರಪ್ಪನವರು ಹಿಂದುಳಿದ ವರ್ಗಗಳಿಗೆ ಅನುದಾನ ನೀಡಿದ್ರೂ, ಈಗ ಹಿಂದುಳಿದ ವರ್ಗಗಳ ಅನುದಾನವನ್ನ ಕೂಡ ಕಡಿತ ಮಾಡಿದ್ದಾರೆ ಎಂದು ಹೇಳಿದರು.
ವಿದ್ಯುತ್ ಬೆಲೆ ಏರಿಕೆ, ಬಸ್ಸಿನ ಟಿಕೆಟ್ ದರ ಕೂಡ ಹೆಚ್ಚಿಸಿದ್ರು, ರೈತರ ಪಂಪ್ ಸೆಟ್ ಗಳಿಗೆ ಟ್ರಾನ್ಸಫಾರ್ಮರ್ ಹಾಕಿಸಲು ಈಗ 3 ಲಕ್ಷ ಅಗುತ್ತೆ ಬಿಜೆಪಿ ಇದ್ದಾಗ ಕೇವಲ 25 ಸಾವಿರೂಗೆ ಟ್ರಾನ್ಸಫಾರ್ಮರ್ ಹಾಕಬಹುದಿತ್ತು. ಎಣ್ಣೆಯದರವನ್ನ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದೂ ಕೈಯಲ್ಲಿ ಕಿತ್ತುಕೊಳ್ತಿದ್ದಾರೆ, ರಾಜ್ಯದ ಮತದಾರರ ಕಿವಿಗೆ ಹೂ ಮುಡಿಸಿ ಅಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ರೈತರ ವಿರೋಧಿ, ಬಡವರ ವಿರೋಧಿ, ಹಾಗೂ ದಲಿತರ ವಿರೋಧಿ ಸರ್ಕಾರವಿದೆ ಎಂದು ಹೇಳಿದರು.
ಕೇಂದ್ರ ಅನುದಾನದ ವಿಚಾರದಲ್ಲಿ ಸಿದ್ದರಾಮಯ್ಯ ಸವಾಲು ಹಾಕ್ತಾರೆ. ನನ್ನ ತೆರಿಗೆ ನನ್ನ ಹಕ್ಕು. ಎಂದು ಶಾಸಕರನ್ನ ಕರೆದು ಕೊಂಡು ಪ್ರತಿಭಟನೆ ಮಾಡಿದ್ದಾರೆ. 2014 -19 ರಲ್ಲಿ1.35 ಲಕ್ಷ ಕೋಟಿ ಕೇಂದ್ರದಿಂದ ಬಂದಿದೆ. ಕಳೆದ ಹತ್ತು ವರ್ಷದಲ್ಲಿ ರಾಜ್ಯಕ್ಕೆ 2.93 ಲಕ್ಷ ಕೋಟಿ ಬಂದಿದೆ. ಯುಪಿಎ ಸರ್ಕಾರದಲ್ಲಿ 81 ಸಾವಿರ ಕೋಟಿ ಬಂದಿದೆ ಅಷ್ಟೇ. ಬಿಜೆಪಿ 4.48 ಲಕ್ಷ ಮನೆಯನ್ನ ಕಟ್ಟಿಸಿಕೊಡುವ ಕೆಲಸ ಮಾಡಲಾಗಿದೆ ಎಂದರು.
74 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಜಲಜೀವನ್ ಮಿಷನ್ ಅಡಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ 4.41 ಕೋಟಿ ಅಷ್ಟು ಹಣ ನೀಡಲಾಗಿದೆ. ಕೇಂದ್ರಸರ್ಕಾರದ 10 ವರ್ಷಗಳ ಯೋಜನೆಗಳನ್ನ ವಿಜಯೇಂದ್ರ ಬಿಚ್ಚಿಟ್ಟಿದ್ದಾರೆ.
ಬಾಲರಾಜ್ ಒಬ್ರೂ ಸಜ್ಜನ ರಾಜಕಾರಣಿ. ಅಭ್ಯರ್ಥಿಗಳ ಬಗ್ಗೆ ಯಾವ ರೀತಿಯ ಅಭಿಪ್ರಾಯವಿದೆ ನಿಮಗೆ ಗೊತ್ತು. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ನಾನು ಟೀಕೆ ಮಾಡಲ್ಲ. ಪಾರದರ್ಶಕವಾದ ಆಡಳಿತ ಕೊಟ್ಟ ಮೋದಿಯವರು ಇನ್ನೊಮ್ಮೆ ಪ್ರಧಾನ ಮಂತ್ರಿಯಾಗ್ತಾರೆ. ಚಾಮರಾಜನಗರದಲ್ಲಿ ದಾಖಲೆ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಸಜ್ಜನ ರಾಜಕಾರಣಿ ಬಾಲರಾಜ್ಗೆ ಅಶೀರ್ವಾದ ಮಾಡಿ ಎಂದು ಹೇಳಿದರು.