ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟ, ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಸ್ಪರ್ಧಿ ಲೋಕೇಶ್ ಕುಮಾರ್ ಬರೋಬರಿ 500 ಕಿಮೀಗಳ ಪಾದಯಾತ್ರೆ ಮಾಡಿದ್ದಾರೆ.ಅಂದ್ರೆ ಅಮಿನಗಡದಿಂದ (ಬಾಗಲಕೋಟೆ) ಶ್ರೀಶೈಲ (ಆಂಧ್ರಪ್ರದೇಶ)ದವರೆಗೆ ಕಾಲ್ನೆಡಿಗೆ ಮುಗಿಸಿದ್ದಾರೆ.
ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದು ಹೀಗೆ, “ಅಬ್ಬಬ್ಬಾ ಕೊನೆಗೂ 500 ಕಿಲೋಮೀಟರ್ ಪಾದಯಾತ್ರೆಯನ್ನ ಮುಗಿಸ್ಬಿಟ್ಟೆ , (ಅಮಿನಗಡ to ಶ್ರೀಶೈಲ.). ನಮ್ಮ ಜೊತೆ ಬಂದಂತಹ ಎಲ್ಲಾ ಸ್ನೇಹಿತರಿಗೂ ಹಾಗೂ ದಾರಿ ಉದ್ದಕ್ಕೂ ದಾಸೋಹ ಮಾಡಿದ ಎಲ್ಲಾ ತಂದೆ ತಾಯಿಯರಿಗೂ ಶರಣು ಶರಣಾರ್ಥಿ” ಎಂದು ಲೋಕೇಶ್ ಕುಮಾರ್ ಅವರು ಹೇಳಿದ್ದಾರೆ.
ಲೋಕೇಶ್ ಕುಮಾರ್ ಅವರು ಯಾವಾಗಿನಿಂದ ಪಾದಯಾತ್ರೆ ಶುರು ಮಾಡಿದ್ರು? ಎಷ್ಟುದಿನ ಬೇಕಾಯ್ತು? ಯಾವ ಕಾರಣಕ್ಕಾಗಿ ಪಾದಯಾತ್ರೆ ಎಂಬುದನ್ನು ಬಹಿರಂಗವಾಗಿ ಲೋಕೇಶ್ ಕುಮಾರ್ ಅವರು ತಿಳಿಸಿಲ್ಲ.
ಡಯಾನ ಹೆಚ್ ಆರ್,ಫ್ರೀಡಂ ನ್ಯೂಸ್