ಬೆಂಗಳೂರು : ವಿಧಾನಸೌಧದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭದ್ರತಾ ಲೋಪಗಳು ಆಗುತ್ತಲೇ ಇವೆ. ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಅದೇ ರೀತಿಯಾಗಿ ಯಾವುದೇ ರೀತಿಯ ಅನುಮತಿ ಪತ್ರಗಳು ಅಥವಾ ಪಾಸ್ಗಳು ಇಲ್ಲದೇ ವಿಧಾನಸೌಧಕ್ಕೆ ಅಪರಿಚಿತರು ಪ್ರವೇಶಿಸುವ ಮೂಲಕ ಭದ್ರತಾ ಲೋಪಗಳು ಕಂಡುಬಂದಿದ್ದವು. ಅಷ್ಟೇ ಅಲ್ಲದೇ ಕೆಲವೊಮ್ಮೆ ರಾಜಕೀಯ ನಾಯಕರ ಹೆಸರು ಹೇಳಿಕೊಂಡು ವಿಧಾನಸೌಧ ಒಳಗೆ ಹೋಗುತ್ತಾರೆ. ಹೀಗಾಗಿ ರಾಜ್ಯದ ಶಕ್ತಿಸೌಧದೊಳಗೆ ಯಾರು ಯಾವಾಗ ಹೋಗಬಹುದು, ಬರಹುದು ಎನ್ನುವ ರೀತಿಯಾಗಿದೆ. ಇದೀಗ ಕೆಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಗೃಹ ಇಲಾಖೆ ಇವುಗಳಿಗೆಲ್ಲ ಬ್ರೇಕ್ ಹಾಕಲು ಮುಂದಾಗಿದೆ.
ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಕಳೆದ ವಿಧಾನ ಸಭೆ ಅಧಿವೇಶನ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್ಗಳಿಲ್ಲ ಎಂದು ಹೇಳಿದರು. ಹಾಗಾಗಿ ಇಂದು 2 ರಿಂದ 3 ಕೋಟಿ ರೂ. ಹಣ ಖರ್ಚು ಮಾಡಿ ನಾಲ್ಕು ಗೇಟ್ಗಳಲ್ಲಿ ಹೊಸ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿದ್ದೇವೆ ಎಂದು ಹೇಳಿದ್ದಾರೆ.
ವಿಧಾನ ಸೌಧಕ್ಕೆ ಬರುಬೇಕು ಅಂದರೆ ಇನ್ನು ಮುಂದೆ ಕ್ಯೂಆರ್ ಕೋಡ್ ಇರುವ ಪಾಸ್ಗಳನ್ನು ನೀಡಲಾಗುತ್ತದೆ. ವಿಧಾನ ಸೌಧದಲ್ಲಿ ಯಾರಾದರೂ ಲೋಹದ ವಸ್ತುಗಳನ್ನು ತಗೊಂಡು ಹೋಗುತ್ತಿದ್ದರೆ ಈ ಬ್ಯಾಗೇಜ್ ಸ್ಕ್ಯಾನರ್ನಲ್ಲಿ ಗೊತ್ತಾಗುತ್ತದೆ. ಮೂರು ವರ್ಷಗಳಿಂದ ಈ ಬ್ಯಾಗೇಜ್ ಸ್ಕ್ಯಾನರ್ ಕೆಟ್ಟಿದ್ದವು. ಈಗ ಸಿಎಂ ಸಿದ್ದರಾಮಯ್ಯ ಅವರು ಹಣ ಬೀಡುಗಡೆ ಮಾಡಿದ ಮೇಲೆ ಈ ಬ್ಯಾಗೇಜ್ ಸ್ಕ್ಯಾನರ್ ತೆಗೆದುಕೊಂಡು ಬಂದಿದ್ದೇವೆ ಎಂದರು.
ವಿಧಾನ ಸೌಧದಲ್ಲಿ ಸೆಕ್ಯೂರಿಟಿ ಇನ್ನು ಜಾಸ್ತಿ ಮಾಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ನಾವು ಹೆಚ್ಚು ಭದ್ರತೆ ಕೈಗೊಳ್ಳುತ್ತೇವೆ. ಇನ್ನು ಮುಂದೆ ವಿಧಾನ ಸೌಧ ಪ್ರವೇಶ ಮಾಡಲು ಬೇಕಾಬಿಟ್ಟಿ ಪಾಸ್ಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.