ಬೆಂಗಳೂರು : ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸುತ್ತಿರುವ ‘ಲವ್‌ಲಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇತ್ತೀಚೆಗೆ ಲಂಡನ್‌ನಲ್ಲಿ ಪೂರ್ಣಗೊಂಡಿದ್ದು, ಇದರ ಎರಡನೇ ಹಾಡು ಕೂಡ ರಿಲೀಸ್ ಆಗಿದೆ. ಈ ಬಗ್ಗೆ ಹೇಳಿರುವ ನಿರ್ದೇಶಕ ಚೇತನ್ ಕೇಶವ್, “ಐದಾರು ಬ್ಯಾನರ್ಗಳನ್ನು ಈ ಒಂದೇ ಸಿನಿಮಾದಲ್ಲಿ ನೋಡಬಹುದು. ಉತ್ತಮ ಕಂಟೆಂಟ್ ಇರುವ ಈ ಚಿತ್ರ, ಬಿಗ್ ಬಜೆಟ್‌ನದ್ದಾಗಿದ್ದು, ಇದರಲ್ಲಿ ನಟ ವಸಿಷ್ಠ ಸಿಂಹ ಒಬ್ಬ ಕಲಾವಿದರಾಗಿ ಹಲವು ಆಯಾಮಗಳಲ್ಲಿ ಕಾಣಿಸಿಕೊಂಡಿದ್ದಾರೆ” ಎಂದಿದ್ದಾರೆ.
ಈ ಚಿತ್ರದಲ್ಲಿ ಪ್ರೇಮಕಥೆ ಹಾಗೂ ರೌಡಿಸಂ ಎರಡೂ ಇರಲಿವೆ. ಈ ಬಗ್ಗೆ ನಾಯಕ ನಟ ವಸಿಷ್ಠ ಸಿಂಹ, “6 ಟು 60 ವರ್ಷದವರೆಗಿನ ಪ್ರತಿಯೊಬ್ಬರೂ ನೋಡಬೇಕಾದ ಚಿತ್ರವಿದು. ಎಲ್ಲರಿಗೂ ಆಪ್ತವಾಗುವಂತಹ ಫ್ಯಾಮಿಲಿ ಎಂಟರ್‌ಟೇನರ್ ಕಂಟೆಂಟ್ ಇದರಲ್ಲಿದೆ. ನವಿರು ಪ್ರೇಮಕಥೆಯ ಜತೆಗೆ ಭರ್ಜರಿ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿದ್ದು, ಕೆಲವು ಅಮಾನುಷ ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ” ಎಂದು ಹೇಳಿದ್ದಾರೆ.