ಬೆಂಗಳೂರು :ನಟಿ ಸಂಗೀತಾ ಭಟ್ ಇದೀಗ ಮತ್ತೆ ತಮ್ಮ ಫೋಟೋಗಳ ಮೂಲಕ ಇಂಟರ್ನೆಟ್‌ಗೆ ಕಿಚ್ಚು ಹಚ್ಚಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೆಂಪು ಬಣ್ಣದ ಸ್ಯಾಟಿನ್ ಬ್ರೇಸರ್ ಜೊತೆಗೆ ಮ್ಯಾಚ್ ಆಗುವ ಕಪ್ಪು ಬಣ್ಣದ ಲಾಂಗ್ ಸ್ಕರ್ಟ್ಠರಿಸಿರುವ ಸಂಗೀತಾ ಭಟ್, ನಿರಾಭರಣ ಸುಂದರಿಯಾಗಿ ಗಲ್ಲದ ಮೇಲೆ ಮೂರು ಕಪ್ಪು ಚುಕ್ಕೆ ಇಟ್ಟು ಪೋಸ್ ನೀಡಿದ್ದು, ಅವರ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ಮತ್ತು ಕಲರ್ ಫೋಟೋಗಳೆರನ್ನೂ ಹಂಚಿಕೊಂಡಿರುವ ಸಂಗೀತಾ ಭಟ್ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಉಫ್ ಉಫ್ ಎಂದು ಹೇಳುತ್ತಿದ್ದಾರೆ.
ಬೆಂಕಿಯ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದು, ತುಂಬಾನೆ ಹಾಟ್ ಮತ್ತು ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಸಂಗೀತಾ ಭಟ್ ತಮ್ಮ ನ್ಯಾಚುರಲ್ ಅಭಿನಯದ ಮೂಲಕ ಜನಪ್ರಿಯತೆ ಪಡೆದ ಈ ನಟಿ ಇದೀಗ ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಿದ್ದಾರೆ.