ಯುಗಾದಿ ಹಬ್ಬದ ಸಂಭ್ರಮಕ್ಕೆ ಫ್ರೀಡಂ ಟಿವಿ ಕನ್ನಡ ನಿಮ್ಮ ಮನೆ ಮನಗಳ ತಲುಪುತ್ತಿದೆ. ಕನ್ನಡಿಗರ ಮಡಿಲಲ್ಲಿ ಇನ್ಮುಂದೆ ಫ್ರೀಡಂ ಟಿವಿ ಮೆರವಣಿಗೆ ನಡೆಸಲಿದೆ. ಅನುಭವಿ ಪತ್ರಕರ್ತ ಎಲ್. ಎಮ್ ನಾಗರಾಜ್ ಅವರ ಸಾರಥ್ಯ ಹಾಗೂ ಮಾಲೀಕತ್ವದಲ್ಲಿ ಫ್ರೀಡಂ ಟಿವಿ ಕನ್ನಡ ಸುದ್ದಿವಾಹಿನಿ ಲೋಕಾರ್ಪಣೆಗೊಳ್ಳುತ್ತಿದೆ. 09-04-2024ರಂದು ಬೆಳಿಗ್ಗೆ 10 ಗಂಟೆಯಿಂದ ನಿಮ್ಮ ಮನೆಯ ಕೇಬಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಫ್ರೀಡಂ ಟಿವಿ ಚಾನಲ್ ಲಭ್ಯವಿರುತ್ತದೆ.
ರಾಜ್ಯಾದಾದ್ಯಂತ ತನ್ನದೇ ನೆಟ್ವರ್ಕ್ ಹೊಂದಿರುವ ಫ್ರೀಡಂ ಟಿವಿ ಚಾನಲ್ನ ಮುಖ್ಯ ಕಚೇರಿ ಬೆಂಗಳೂರಿನ ಸದಾಶಿವನಗರದ ಭಾಷ್ಯಂ ಸರ್ಕಲ್ ಬಳಿಯಿದೆ. ಜನಸಾಮಾನ್ಯರ ಶಕ್ತಿ ಎನ್ನುವ ಟ್ಯಾಗ್ಲೈನ್ನೊಂದಿಗೆ ಲೋಕಾರ್ಪಣೆಗೊಳ್ಳುವ ಫ್ರೀಡಂ ಟಿವಿ ತಾಜಾ ಸುದ್ದಿಗಳು ಹಾಗೂ ಮನರಂಜನೆಯನ್ನು ನಿಮಗೆ ನೀಡಲಿದೆ. ಯುವ ಪತ್ರಕರ್ತರ ಸಮೂಹವೇ ಫ್ರೀಡಂ ಟಿವಿಯಲ್ಲಿ ನಿಮಗೆ ಸುದ್ದಿಗಳನ್ನ ನೀಡಲಿದ್ದಾರೆ
ಎಲ್. ಎಮ್ ನಾಗರಾಜ್ ಅವರು ಈ ಹಿಂದೆ ಬಿಟಿವಿ ಸುದ್ದಿವಾಹಿನಿ, ವಿಜಯ ಕರ್ನಾಟಕ, ವಾರ್ತಾ ಭಾರತಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿದ್ದಾರೆ. ಇವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಹಾಗೂ UGC ರಾಷ್ಟ್ರೀಯ ಅರ್ಹತಾ ಪರೀಕ್ಷೆ, ಹಾಗೂ ರಾಜ್ಯ ಅರ್ಹತಾ ಪರೀಕ್ಷೆ ಪದವಿ ಪಡೆದು ಶೈಕ್ಷಣಿಕವಾಗಿ ಅರ್ಹತೆ ಪಡೆದವರು ಸಮಾಜಮುಖಿ ಚಿಂತನೆ ಹಾಗು ವಸ್ತುನಿಷ್ಠ ವರದಿಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಬಿಟಿವಿಯಲ್ಲಿ ಸುದ್ದಿ ನ್ಯೂಸ್ ಪ್ರೊಡ್ಯೂಸರ್ , Principal Correspondent, ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿ ಕೆಲಸ ಮಾಡಿರುವ ಎಲ್. ಎಮ್ ನಾಗರಾಜ್ ಈಗ ಹೊಸದೊಂದು ಸಾಧನೆಗೆ ಕೈ ಹಾಕಿದ್ದಾರೆ.