ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ನಗರದ ಕ್ರಿಕೆಟ್ ಅಭಿಮಾನಿ ಯುವತಿಯೊಬ್ಬಳು ಪ್ರತಿಜ್ಞೆ ಮಾಡಿದ್ದಾಳೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಆರಂಭವಾಗಿ 16 ವರ್ಷಗಳೇ ಕಳೆದಿವೆ. ಅಂದರೆ, 2008 ರಿಂದಲೇ ಐಪಿಎಲ್ ಟಿ-20 ಆರಂಭವಾಗಿದೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಚುಟುಕು ಕ್ರಿಕೆಟ್‌ನ ಜ್ವರ ಹೆಚ್ಚಾಗುವಂತೆ ಮಾಡಿದೆ.
ಇದೇ ವೇಳೆ ಬೆಂಗಳೂರಿನ ಯುವತಿಯೊಬ್ಬಳು ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ತಾನು ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ. ಈ ಬಗ್ಗೆ ಸ್ವತಃ ಯುವತಿಯೇ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಸಂಬಂಧಪಟ್ಟ ಪೋಸ್ಟರ್ ಒಂದನ್ನು ಪ್ರದರ್ಶಿಸಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಕಳೆದ ಹದಿನಾರು ವರ್ಷದಲ್ಲಿ ಆರ್‌ಸಿಬಿ 3 ಬಾರಿ ಫೈನಲ್ ಪ್ರವೇಶಿಸಿದ್ದರೂ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ದೆಹಲಿಯಲ್ಲಿ ನಡೆದ ಪಂದ್ಯದ ವೇಳೆ ಆರ್‌ಸಿಬಿ ತಂಡದ ಬೆಂಗಳೂರು ಅಭಿಮಾನಿಯೊಬ್ಬಳು ‘ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆ ಮಾಡಿಕೊಳ್ಳುವುದಿಲ್ಲ'(NOT GETTING MARRIED TILL RCB WIN IPL TROPHY) ಎಂದು ಬರೆದಿರುವ ಪೋಸ್ಟರ್ ಅನ್ನು ಪ್ರದರ್ಶನ ಮಾಡಿದ್ದಾಳೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಳೆದ ವರ್ಷದಿಂದ ಆರಂಭವಾದ ಮಹಿಳಾ ಐಪಿಎಲ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು ಭಾರತ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ನಾಯಕತ್ವದಲ್ಲಿ 2024ರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.


