ಮದುವೆ ಶಾಸ್ತ್ರಕ್ಕೂ ಖಾಕಿ ಡ್ರೆಸ್ನಲ್ಲಿ ಯುವತಿ!

ಬೆಂಗಳೂರು :ರೈಲ್ವೇ ಎಸ್‌ಐ ಎಂದು ಹೇಳಿಕೊಳ್ಳುತ್ತಿರುವ ಯುವತಿ ಮಾಳವಿಕಾ ಬಂಡಾರ ಮರಾಮೋಸದಾಟವನ್ನು ರೈಲ್ವೆ ಪೊಲೀಸರು ಬಯಲಿಗೆಳೆದಿದ್ದಾರೆ.
ರೈಲ್ವೇ ಪೊಲೀಸ್ ಆಗಬೇಕೆಂದುಕೊಂಡಿದ್ದ ಮಾಳವಿಕಾ ಖಾಕಿ ಯೂನಿಫಾರಂ ಧರಿಸಿಯೇಬಿಟ್ಟರು. ನಾರ್ಕೆಟ್‌ಪಲ್ಲಿ ಗ್ರಾಮದಲ್ಲಿ ಆರ್‌ಪಿಎಫ್ ಎಸ್‌ಐ ಆಗಿ ಸಂಚರಿಸಲು ಶುರುಮಾಡಿದ್ದರು. ತಾನು ಶಂಕರಪಲ್ಲಿ ಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನೂನಂಬಿಸಿದ್ದಳು. ಯುವತಿಯ ಅನೇಕ ಪರಿಚಯಸ್ಥರು ಆಕೆಗೆ ಕೆಲಸ ಸಿಕ್ಕಿದೆ ಎಂದೇ ನಂಬಿದ್ದರು.
ಮಾಳವಿಕಾ ಹುಡುಗಿ ನೋಡುವ ಶಾಸ್ತ್ರಕ್ಕೂ ಸಮವಸ್ತ್ರದಲ್ಲೇ ಬಂದಾಗ ವರನ ಕಡೆಯವರು ಬೆಚ್ಚಿಬಿದ್ದಿದ್ದಾರೆ. ಯುವಕನ ಸಂಬಂಧಿಕರು ಮಾಳವಿಕಾ ವರ್ತನೆ ಬಗ್ಗೆ ತಮಗೆ ತಿಳಿದ ರೈಲ್ವೇ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿದ್ದಾರೆ. ಮಾಳವಿಕಾ ಎಂಬುವವರು ಯಾರೂ ರೈಲ್ವೇ ಎಸ್‌ಐ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಸ್ಥಳಕ್ಕೆ ಬಂದ ನಲ್ಗೊಂಡ ರೈಲ್ವೇ ಪೊಲೀಸರು ಮಾಳವಿಕಾಳನ್ನು ಬಂಧಿಸಿದ್ದಾರೆ. ಆದರೆ ತಾನು ಎಸ್‌ಐ ಆಗಲು ಸಾಧ್ಯವಾಗಲಿಲ್ಲ ಎಂದು ಪೋಷಕರು ಆತಂಕಗೊಂಡಿದ್ದು, ಅದಕ್ಕಾಗಿಯೇ ನಕಲಿ ಎಸ್‌ಐ ವೇಷ ತೊಟ್ಟಿರುವುದಾಗಿ ಮಾಳವಿಕಾ ತನ್ನ ಪ್ರವರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.




