ಬೆಂಗಳೂರು :’ಪುಷ್ಪ 2′ ಸಿನಿಮಾದ ಶೂಟಿಂಗ್ ಸೆಟ್ಟಿಂದ ವಿಡಿಯೋ ಲೀಕ್ ಆಗಿದೆ. ಈ ಮೂಲಕ ಶ್ರೀವಲ್ಲಿ ಪಾತ್ರದ ಲುಕ್ ಬಹಿರಂಗ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸ್ವತಃ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳನ್ನು ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಕಾಂಜೀವರಂ ಸೀರೆ ಧರಿಸಿ ಮಿಂಚಿದ್ದಾರೆ. ಮಧುಮಗಳ ರೀತಿಯಲ್ಲಿ ಮೈತುಂಬ ಆಭರಣ ಧರಿಸಿ ಅವರು ನಡೆದುಬರುತ್ತಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಪುಷ್ಪರಾಜ್ಞ ಹೆಂಡತಿ ಶ್ರೀವಲ್ಲಿ ಪಾತ್ರ ‘ಪುಷ್ಪ 2’ ಚಿತ್ರದಲ್ಲೂ ಮುಂದುವರಿಯಲಿದೆ. ಆ ಪಾತ್ರದ ಶೂಟಿಂಗ್ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ.