ಬೆಂಗಳೂರು : ನಟಿ ನಯನತಾರಾ ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಜಸ್ಟ್ 50 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಿದಕ್ಕೆ ದುಬಾರಿ ಸಂಭಾವನೆ ಪಡೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಜವಾನ್’ ನಟಿ ನಯನತಾರಾಗೆ ಸಿನಿಮಾ, ಜಾಹೀರಾತು ಕ್ಷೇತ್ರದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ನಟಿಸಿದ ಮೊದಲ ಬಾಲಿವುಡ್ ಚಿತ್ರ ಹಿಟ್ ಆದ್ಮಲೆ ಕೇಳಬೇಕೇ. ಸಂಭಾವನೆ ತುಸು ಜಾಸ್ತಿಯೇ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಜಾಹೀರಾತಿನಲ್ಲಿ ನಯನತಾರಾ ನಟಿಸಿದ್ದಾರೆ. ಕೇವಲ 50 ಸೆಕೆಂಡ್ ಕಾಣಿಸಿಕೊಂಡಿದಕ್ಕೆ 5 ಕೋಟಿ ರೂ. ನಟಿ ಪಡೆದಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠಿತ ಸಂಸ್ಥೆ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದು, 2 ದಿನಗಳ ಕಾಲ ಶೂಟಿಂಗ್ ನಡೆದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದಕ್ಕೆ 5 ಕೋಟಿ ಸಂಭಾವನೆ ಪಡೆಯುವ ಮೂಲಕ ಬೇಡಿಕೆ ನಟಿಯಾಗಿ ಸುದ್ದಿಯಾಗಿದ್ದಾರೆ.