ಬೆಂಗಳೂರು : ಜೂನ್​ ಮೊದಲ ವಾರ ಮದ್ಯಪ್ರಿಯರಿಗೆ ಶಾಕ್​ ಕಾದಿದೆ. ಮಳೆಗಾಲ ಆರಂಭವಾಗುತ್ತೆ, ಸಾಯಂಕಾಲ ಜಿಟಿಜಿಟಿ ಮಳೆ-ಚಳಿಯಲ್ಲಿ ಒಂದು ಪೆಗ್​ ಏರಸತಾ ಕೂರಬೇಕು ಅಂದುಕೊಂಡಿರುವ ಮದ್ಯಪ್ರಿಯರು ಈ ಸುದ್ದಿಯನ್ನೊಮ್ಮೆ ಓದಿ ಬಿಡಿ. ಜೂನ್​​ ಮೊದಲ ವಾರ ನೀವು ಮದ್ಯದ ಮಳಿಗೆಗಳ ಬಳಿ ಹೋದರೆ ನಿರಾಸೆಯಿಂದ ವಾಪಸ್​ ಆಗಬೇಕಾಗುತ್ತದೆ. ಏಕೆಂದರೆ ವಿಧಾನ ಪರಿಷತ್​ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಮತ ಎಣಿಕೆ ಇರುವುದರಿಂದ ಜೂನ್​ 1 ರಿಂದ 6ರ ವರೆಗೆ ಮದ್ಯದ ಮಾರಾಟವನ್ನು ಬಂದ್​​ ಮಾಡುವಂತೆ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

 

ಜೂನ್ 1 ರಿಂದ 6ರವರೆಗೆ (ಜೂನ್ 5 ಹೊರತುಪಡಿಸಿ) ಬೆಂಗಳೂರಿನ ಎಲ್ಲ ಎಣ್ಣೆ ಅಂಗಡಿಗಳು ಸಂಪೂರ್ಣವಾಗಿ ಬಂದ್ ಇರಲಿವೆ. ಜೂನ್ 3 ರಂದು ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಾಯಂಕಾಲ 4 ಗಂಟೆಯಿಂದ ಜೂನ್ 3ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಇನ್ನು ಜೂನ್ 4 ರಂದು ದೇಶಾದ್ಯಂತ ಲೋಕಸಭೆ ಚುನಾವಣೆಯ ಮತ ಎಣಿಕೆ‌ ನಡೆಯುವುದರಿಂದ ಅಂದು ಸಹ ಸಂಪೂರ್ಣವಾಗಿ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಬಂದ್​ ಇರಲಿವೆ. ಜೂನ್​ 5 ರಂದು ಯಥಾಪ್ರಕಾರ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಮತ್ತೆ ಜೂನ್ 6 ರಂದು ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ ಇರುವುದರಿಂದ ಅಂದು ಸಹ ಎಲ್ಲ ತರಹದ ಎಣ್ಣೆ ಅಂಗಡಿಗಳು ಬಂದ್​ ಆಗಲಿವೆ.

By Veeresh

Leave a Reply

Your email address will not be published. Required fields are marked *

Verified by MonsterInsights