ಬೆಂಗಳೂರು : ಮಾನ್ಯ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ನೋಡಲೇಬೇಕಾದ ಸ್ಟೋರಿ ಇದಾಗಿದೆ. ಪೊಲೀಸ್ ಪೇದೆಗಳ ಟೋಪಿಗಳಿಗೆ ಕಿಂಚಿತ್ತೂ ಬೆಲೆ ಇಲ್ವಾ..? ರಸ್ತೆ ಬದಿಯಲ್ಲಿ ಮದ್ಯದ ಬಾಟಲಿಗಳ ಮಧ್ಯೆ ಪೊಲೀಸ್ ಪೇದೆ ಟೋಪಿಗಳು ಕಸದಂತೆ ಬಿದ್ದು ನಾರುತ್ತಿವೆ.
ಇದನ್ನ ನೋಡಿದರೆ ನಿಜವಾಗಿಯೂ ಒಂದು ಕ್ಷಣ ಮಾತೇ ನಿಂತು ಹೋಗುತ್ತದೆ. ತಮ್ಮ ಸಮವಸ್ತರಕ್ಕೆ ರಕ್ಷಣೆ ಕೊಡದವರು ಸಾರ್ವಜನಿಕರಿಗೆ ಹೇಗೆ ರಕ್ಷಣೆ ಕೊಡುತ್ತಾರೆಂಬುದೇ ಪ್ರಶ್ನೆಯಾಗಿ ಉಳಿಯುತ್ತದೆ. ರೇಸ್ ಕೋರ್ಸ್ ರಸ್ತೆಯ ಸಚಿವರುಗಳ ಅಧಿಕೃತ ನಿವಾಸದ ಬಳಿಯೇ ಇದೆಂಥಾ ನಾಚಿಕೆಗೇಡಿನ ಘಟನೆ ನಡೆದಿದೆ. ಸಾರ್ವಜನಿಕರ ರಕ್ಷಣೆಗೆ ಇರುವ ಪೊಲೀಸರ ಸಮವಸ್ತ್ರಕ್ಕೆ ರಕ್ಷಣೆ ಇಲ್ವಾ ಹಾಗಾದರೆ. ಪೊಲೀಸರು ತಮ್ಮ ಸಮವಸ್ತ್ರಕ್ಕೆ ರಕ್ಷಣೆ ಕೊಡದವರು ಸಾರ್ವಜನಿಕರಿಗೆ ರಕ್ಷಣೆ ಕೊಡ್ತಾರಾ? ಎಂಬುದೇ ಪ್ರಶ್ನೆಯಾಗಿದೆ.