ಬೆಂಗಳೂರು: ‘ಬೃಂದಾವನ’ ಸೀರಿಯಲ್ ಪುಷ್ಪ ನಟಿ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಅಮೂಲ್ಯ ಭಾರಧ್ವಜ್ ಅವರು ಸದ್ಯ ಸೀರಿಯಲ್ನಲ್ಲಿ ಮೋಡಿ ಮಾಡುತ್ತಿರುವ ಚೆಲುವೆ. ಸೀರೆಯುಟ್ಟು ಮುಗ್ಗೆಯಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯಗೆ ಜೋಡಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.
ಸೀರೆಯುಟ್ಟು ಕ್ಯಾಮೆರಾ ಮುಂದೆ ಬರುವ ಹುಡುಗಿ ‘ಪುಷ್ಪ’ ಈಗ ಶೋಲ್ಡರ್ ಲೆಸ್ ಟಾಪ್ ಮತ್ತು ತುಂಡು ಜೀನ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಅವತಾರ ನೋಡಿ ಇದು ಬೃಂದಾವನ ಸೀರಿಯಲ್ ನಟಿ ಪುಷ್ಪನೇನಾ? ಅಂತ ಶಾಕ್ ಆಗಿ ಫೋಟೋ ನೋಡ್ತಿದ್ದಾರೆ.