ಬೆಂಗಳೂರು : ನಟಿ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಟಚ್ ನಲ್ಲಿದ್ದು, ಹೋಳಿ ಸೆಲೆಬ್ರೇಟ್ ಮಾಡಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ರಾಧಿಕಾ ಶೇರ್ ಮಾಡಿದ ವಿಡಿಯೋದಲ್ಲಿ ನಟಿ ರಾಧಿಕಾ ವೈಟ್ ಕುರ್ತಾ ತೊಟ್ಟು ಬಣ್ಣಗಳನ್ನು ಎರೆಚುತ್ತಾ ಸಂಭ್ರಮಿಸಿದ್ದಾರೆ. ಮೂಲತಃ ಮಂಗಳೂರಿನವರಾದ ನಟಿ ರಾಧಿಕಾ ಕುಮಾರಸ್ವಾಮಿ ಕಡಲ ತೀರದಲ್ಲಿ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಜೊತೆಗೆ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ರಾಧಿಕಾಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ಹೀಗಾಗಿ ಆಗಾಗ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡುತ್ತಿರುತ್ತಾರೆ. ಹೋಳಿ ಸೆಲೆಬ್ರೇಷನ್ ವಿಡಿಯೋ ಶೇರ್ ಮಾಡಿದ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ.