ಬೆಂಗಳೂರು: ನಟ ಪ್ರಭುದೇವ ಚಿನ್ನದ ಗಣಿ ನಾಡಿನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಈ ವಿಚಾರವಾಗಿ ಕೋಲಾರಕ್ಕೆ ಆಗಮಿಸಿದ ನಟ ಪ್ರಭುದೇವ ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಬಂದು ಅಚ್ಚರಿ ಮೂಡಿಸಿದ್ದಾರೆ.
ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಿಂಪಲ್ ಆಗಿ ಬಂದ ನಟ ಪ್ರಭುದೇವ ಕಂಡ ಅಭಿಮಾನಿಗಳು ಕೆಲಕಾಲ ದಂಗಾಗಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ ಪ್ರಭುದೇವ ಸಹಿ ಮಾಡಿ, ಫೋಟೋ ಕೊಟ್ಟು ತೆರಳಿದ್ದಾರೆ. ತಾಲ್ಲೂಕು ಕಚೇರಿ ಎದುರು ಕಾರ್‌ನಲ್ಲಿ ಇಳಿದ ಪ್ರಭುದೇವ ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಬಂದು ಅಚ್ಚರಿ ಮೂಡಿಸಿದ್ದರು. ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಫೋಟೊ ಕೊಟ್ಟು, ಸಹಿ ಮಾಡಿ ತೆರಳಿದ್ದಾರೆ.