ಬಳ್ಳಾರಿ : ಕೆಂಪೆಗೌಡ ಸಿನಿಮಾದ ಆರುಮುಗ ಡೈಲಾಗ್ ರೀತಿ ಸಚಿವ ನಾಗೇಂದ್ರರಿಂದ ಶ್ರೀರಾಮುಲುಗೆ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಾವಾಲ್ ಹಾಕಿದ್ದಾರೆ.
ಈ ಮೋಕಾ ನಂದು, ತಾಕತ್ ಇದ್ರೆ ಬಂದ್ ಲೀಡ್ ತಗೊಂಡ್ ತೋರ್ಸಿ ಎಂದು ರಾಮುಲುಗೆ ಬಹಿರಂಗವಾಗಿ ಸಚಿವ ನಾಗೇಂದ್ರ ಸವಾಲ್ ಹಾಕಿದ್ದಾರೆ. ಈ ಮೋಕ ನಂದು, ಈ ಮೋಕಾ ನಂದು ಎಂದು ಸಚಿವ ಬಿ.ನಾಗೇಂದ್ರ ತೊಡೆ ತಟ್ಟಿ ಹೇಳಿದ್ದಾರೆ. ನಾವು ಬಳ್ಳಾರಿಯಲ್ಲಿ ಕಾಂಗ್ರೆಸ್ ನಿಂದ ಐದು ಜನ ಪಂಚ ಪಾಂಡವರಂತೆ ಗೆದ್ದಿದ್ದೇವೆ. ಈ ಬಾರಿ ನಮ್ಮ ಪಾಂಡವರ ಪರವಾಗಿ ಅರ್ಜುನನ್ನ (ತುಕಾರಾಂ) ಕಣಕ್ಕಿಳಿಸಿದ್ದೇವೆ.
ಬಿಜೆಪಿಯ ರಾಮುಲು ಅಂಡ್ ಟೀಂ ಕೌರವರು, ಕೌರವರಿಗೆ ಕೊನೆಗೆ ಸೋಲು ಗ್ಯಾರಂಟಿ. ಈ ಮೋಕದಿಂದ ಒಂದೇ ಒಂದು ವೋಟೊ ಜಾಸ್ತಿ ಅವರಿಗೆ ಬೀಳಲ್ಲ. ಈ ಮೋಕ ನಂದು, ಈ ಮೋಕಾ ನಂದು ಎಂದು ಸಚಿವ ಬಿ.ನಾಗೇಂದ್ರ ಶೆಡ್ಡು ಹೊಡೆದಿದ್ದಾರೆ. ಮೋಕಾ ನಂದು, ತಾಕತ್ ಇದ್ರೆ ಬಂದ್ ಲೀಡ್ ತಗೊಂಡ್ ತೋರ್ಸಿ. ರಾಮುಲುಗೆ ಬಹಿರಂಗವಾಗಿ ಸಚಿವ ನಾಗೇಂದ್ರ ಸವಾಲ್ ಹಾಕಿದ್ದಾರೆ.
ಪ್ರತೀ ಬಾರಿ ನಾನೇ ಸಿಎಂ ಆಗ್ತಿನಿ, ಉಪ ಮುಖ್ಯಂತ್ರಿ ಆಗ್ತಿನಿ, ಮಂತ್ರಿ ಆಗ್ತಿನಿ ಅಂತಾ ಬರಿ ಸುಳ್ಳು ಹೇಳಿದ್ರೆ ಯಾರು ನಂಬಲ್ಲ ಎಂದರು. ಈಗ ನಾನು ಗೆದ್ರೆ ಸೆಂಟ್ರಕ್ ಮಿನಿಷ್ಟರ್ ಆಗ್ತೀನಿ ಅಂತಾರೆ. ಹಾಲಿಲ್ಲ, ಸೋಲಿಲ್ಲ, ಕೊಡಕು ಪೇರು ಸೋಮಲಿಂಗ ಅಂದಗಾಯ್ತು. ಪ್ರಚಾರದ ವೇಳೆ ಶ್ರೀರಾಮುಲು ಸೆಂಟ್ರಲ್ ಮಿನಿಷ್ಟರಾಗುತ್ತಾರೆ ಅಂತ ಹೇಳೋ ಮಾತಿಗೆ ನಾಗೆಂದ್ರ ಕೌಂಟರ್ ಸಹ ಕೊಟ್ಟಿದ್ದಾರೆ