ಬಳ್ಳಾರಿ : ಬಳ್ಳಾರಿಯ ಕಂಬಳಿ ಬಜಾರ್ ನಲ್ಲಿರುವ ನರೇಶ್ ಗೋಲ್ಡ್ ಶಾಪ್ ಅವರ ಮನೆ ಮೇಲೆ ದಾಳಿ ಮಾಡಿದಂತಹ ಸಂದರ್ಭದಲ್ಲಿ 5 ಕೋಟಿ ನಗದು, ಬೆಳ್ಳಿ ಬಂಗಾರವನ್ನು ವಶಕ್ಕೆ ಪಡೆದಿರುವಂತಹ ಘಟನೆ ನಡೆದಿದೆ.
ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಡಿವೈಎಸ್ಪಿ, ಬ್ರೂಸ್ಪೇಟೆ ಸಿಪಿಐ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಎಸ್ಪಿ ರಂಜಿತ್ ಕುಮಾರ್ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆಯನ್ನ ನಡೆಸಿದ್ದರು. ಪೊಲೀಸರು ಹಣದ ದಾಖಲೆ ಮಾಹಿತಿಯನ್ನ ಕೇಳಿದ್ರು, ಸರಿಯಾದ ದಾಖಲೆ ಹಾಗೂ ಮಾಹಿತಿ ಇಲ್ಲದ ಪರಿಣಾಮ ಹಣವನ್ನು ಬಳ್ಳಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.