ಬಾಗಲಕೋಟೆ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ನ ಕಗ್ಗಂಟಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಹೈ ಕಮಾಂಡ್ ಬಾಗಲಕೋಟೆ ಕ್ಷೆತ್ರದ ಅಭ್ಯರ್ಥಿಯಾಗಿ ಸಂಯುಕ್ತ ಪಾಟೀಲ್ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಬರುತ್ತಿದಂತೆ ಟಿಕೇಟ್ ಆಕಾಂಕ್ಷಿ ವೀಣಾ ಕಾಶಪ್ಪನವರ ಬೆಂಬಲಿಗರ ಆಕ್ರೋಶದ ಕಟ್ಟೆ ಹೊಡೆದು ಹೋಗಿತ್ತು, ಬಾಗಲಕೋಟೆ ನವನಗರ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು, ಟಾಯರಗೆ ಬೆಂಕಿ ಹಚ್ಚಿದರು, ಗೋ ಬ್ಯಾಕ್ ಸಂಯುಕ್ತ ಪಾಟೀಲ್ ಎಂದು ಬಿತ್ತಿ ಪತ್ರಿ ಹಿಡಿದು ಘೋಷಣೆ ಕುಡಿದ್ರೂ, ಅನೇಕ ಕಾಂಗ್ರೆಸ್ ನಾಯಕ ವಿರುದ್ದ ಸಹ ಘೋಷಣೆ ಕೂಗಿ, ಸ್ಥಳೀಯ ನಾಯಕಿ ವೀಣಾ ಕಶಪ್ಪನವರಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಸಿದರು.
ಇನ್ನ ವೀಣಾ ಕಾಶಪ್ಪನವರು ದೆಹಲಿಯ ಹೈ ಕಮಾಂಡ್ ಅಂಗಳದಲ್ಲಿ ಟಿಕೇಟ್ ಕೈ ತಪ್ಪಿದಕ್ಕೆ ಕಣ್ಣೀರು ಸುರಿಸಿದರು ಯಾವುದೇ ಫಲ ಸಿಗಲ್ಲಿಲ. ಅಸ್ಟೊತ್ತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತ ಪಾಟೀಲ್ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಬಂದಿತ್ತು. ಪುಲ್ ಆಕ್ಟಿವ್ ಆದ ಸಂಯುಕ್ತ ಪಾಟೀಲ್ ಬುದುವಾರ ಸಾಯಂಕಾಲ ಬಾಗಲಕೋಟೆ ಲೋಕಸಭಾ ಕ್ಷೆತ್ರದ ಬೀಳಗಿ ಪಟ್ಟಣಕ್ಕೆ ಆಗಮಿಸಿ ಶಾಸಕ ಜೆ ಟಿ ಪಾಟೀಲರನ್ನ ಭೇಟಿ ಆಗಿ ಆಶೀರ್ವಾದ ಪಡೆದುಕೊಂಡರು. ಬಳಿಕ ಅನೇಕ ಕಾರ್ಯಕರ್ತರೊಂದಿಗೆ ಚುನಾವಣೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಿ ನಿರ್ಗಮಿಸಿದರು.
ಆರಂಭದಿಂದಲೂ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಸಂಯುಕ್ತ ಪಾಟೀಲ್ ಪರ ಪ್ರಚಾರಕ್ಕೆ ಹೋಗುತ್ತಾರ……?ಇನ್ನೊಮ್ಮೆ ವೀಣಾಗೆ ಟಿಕೇಟ್ ಕೊಟ್ಟರೆ ಚನ್ನಾಗಿರಿತ್ತಿತ್ತು, ಗದ್ದಿಗೌಡರ ವಿರುದ್ದ ಪ್ರತಿ ಸ್ಪರ್ಧೆ ಮಾಡುವುದಕ್ಕೆ ವೀಣಾ ಕಾಶಪ್ಪನವರೆ ಬೆಸ್ಟ್ ಕ್ಯಾಂಡೇಟ್ ಎಂದು ಕ್ಷೆತ್ರದ ಜನತೆ ಗುಸು ಗುಸು ಮಾತನಾಡುತ್ತಿದ್ದಾರೆ. ಒಟ್ಟಿನಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದು ಐದನೇ ಭಾರಿ ಸ್ಪರ್ಧೆಗೆ ಮುಂದಾದ ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಗದ್ದುಗೆಯನ್ನ ಅಲ್ಲಾಡಿಸುತ್ತಾರಾ ಎಂಬುದನ್ನ ಕಾದುನೋಡಬೇಕಾಗಿದೆ.